Wednesday, December 3, 2025

Latest Posts

ಸಿದ್ದರಾಮಯ್ಯ ಜನವರಿಯಲ್ಲಿ ರಾಜೀನಾಮೆ ಕೊಡೋದು ಪಕ್ಕಾ: ಗೋವಿಂದ ಕಾರಜೋಳ

- Advertisement -

ಏಕಾಏಕಿ ನಿನ್ನೆ ಸಿದ್ದರಾಮಯ್ಯನವರಿಗೆ ವೈರಾಗ್ಯದ ಮಾತುಗಳು ಆರಂಭವಾಗಿದೆ. ರಾಜಕೀಯ ಏನು ನಮ್ಮ ಅಪ್ಪನ ಆಸ್ತಿನಾ? ರಾಜಕಾರಣ, ಅಧಿಕಾರ ಶಾಶ್ವತವಾ? ಅಂತ ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡೋದು ನಿಶ್ಚಯ ಆದಂತಿದೆ. ಅವರ ಮಾತಿಂದ ನನಗೆ ಹಾಗೆ ಅನಿಸುತ್ತಿದೆ. ರಾಜೀನಾಮೆಗೆ ಕ್ಷಣಗಣನೆ ಶುರುವಾದಂತೆ ಕಾಣುತ್ತಿದೆ. ವೈರಾಗ್ಯದ ಮಾತು ಕೇಳಿದ್ರೆ ಜನವರಿಯಲ್ಲಿ ಸಿದ್ದರಾಮಯ್ಯ ಕುರ್ಚಿ ಬಿಡ್ತಾರೆ ಅಂತ ಗೋವಿಂದ ಕಾರಜೋಳ ಹೇಳಿದ್ದಾರೆ.

ಒಂದು ಕಡೆ ಸಿದ್ದರಾಮಯ್ಯನವರ ಮುಖ ಸಪ್ಪಗಾಗಿದೆ. ಡಿಕೆಶಿವಕುಮಾರ್ ಮತ್ತು ಡಿಕೆ ಸುರೇಶ ಅತ್ಯಂತ ಉತ್ಸಾಹದಿಂದ ಓಡಾಡ್ತಾಯಿದ್ದಾರೆ. DK ಬ್ರದರ್ಸ್ ಇಷ್ಟು ಲವಲವಿಕೆಯಿಂದ ಇರೋದನ್ನ ನೋಡಿದ್ರೆ ಡಿಕೆ ಸುರೇಶ್ ಅವರ ಅಣ್ಣನಿಗೆ ಸಿಎಂ ಆಗೋ ಯೋಗ ಕೂಡಿ ಬಂದ ಹಾಗೆ ಕಾಣಿಸುತ್ತಿದೆ.
ನಾವು ಅಧಿಕಾರದಲ್ಲಿದ್ದು ಚಿಕನ್ ತಿಂದ್ವಿ, ನಾಟಿ ಕೋಳಿ ಸಾರ್ ತಿಂದ್ವಿ, ಹೈದ್ರಾಬಾದ್ ಬಿರಿಯಾನಿ ತಿಂದ್ವಿ ಅನ್ನೋದು ಮುಖ್ಯವಲ್ಲ.

ನಿಮ್ಮ ಸಾಧನೆ ಏನು? ರಾಜ್ಯದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು? ದೀನ ದಲಿತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಮತ್ತು ಉದ್ಯೋಗಕ್ಕೆ ನೀವು ಮಾಡಿದ ಯೋಜನೆ ಏನು? ಎರಡೂವರೆ ವರ್ಷದ ಅಧಿಕಾರದ ಅವಧಿಯಲ್ಲಿ ನೀವು ಏನು ಮಾಡಿದ್ರಿ ಅನ್ನೋದನ್ನ ಜನರ ಮುಂದೆ ಒಂದು ರಿಪೋರ್ಟ್ ಇಡಿ. ನಾಟಿಕೋಳಿ ಅನ್ನೋ ಗಿಮಿಕ್ ಎಲ್ಲ ಬಿಟ್ಟ ಬಿಡಿ. ಸಿದ್ದರಾಮಯ್ಯ ಈ ಎರಡು ವರ್ಷ ಮಾಡಿದ್ದೂ ಏನು ಸಾಧನೆ ಅಲ್ಲ. ಗಿಮಿಕ್ ಮಾಡಿ ಮೋಸದಾಟ ಮಾಡ್ತಿದ್ದಾರೆ ಎಂದಿದ್ದಾರೆ.

ಇನ್ನು ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ? ಅನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕಾರಜೋಳ ಅವ್ರು ವಿಧಾನಸೌಧದಲ್ಲಿ ಬೇಳೂರು ಗೋಪಾಲಕೃಷ್ಣ ಅವರನ್ನ ಭೇಟಿಯಾದಾಗ ಅವರಾಡಿದ ಮಾತುಗಳನ್ನ ಕೇಳಿದ್ರೆ ಸಿದ್ದರಾಮಯ್ಯ ಖಂಡಿತವಾಗಿಯೂ ಜನೇವರಿಯಲ್ಲಿ ರಾಜೀನಾಮೆ ಕೊಡಬಹುದು ಎಂದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss