Political News:
ಕರುನಾಡಲ್ಲಿ ರಾಜಕೀಯ ನಾಯಕರ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಇದರ ಜೊತೆ ವಿಪಕ್ಷ ನಾಯಕ ಸ್ಪರ್ಧೇಯ ಕುರಿತಾಗಿ ದೇವಿ ಭವಿಷ್ಯವನ್ನು ನುಡಿದಿರೋದು ಸಧ್ಯ ರಾಜಕೀಯ ರಣರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ರೆ ಸಿದ್ದರಾಮಯ್ಯಗೆ ಸಾಥ್ ನೀಡಿದ್ರಾ ಚಿಕ್ಕಮ್ಮ ದೇವಿ ಹಾಗಿದ್ರೆ ಸಿದ್ದು ಗೆಲ್ಲೋದು ಕನ್ಫರ್ಮ್ ಆಯ್ತಾ..?! ಇಲ್ಲಿದೆ ಕಂಪ್ಲೀಟ್ ಮಾಹಿತಿ.
ರಾಜಕೀಯ ನಾಯಕರು ಸಾಮಾನ್ಯವಾಗಿ ಗೆಲ್ಲುವ ಸಲುವಾಗಿ ಸಹಸ್ರಾರು ಕಸರತ್ತು ಮಾಡುತ್ತಾರೆ ಅದರ ಜೊತೆಗೆ ದೇವರ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ವಿಶೇಷವೇ ನಡೆದಿದೆ. ದೇವರೇ ಸ್ವತಃ ನಾಯಕನೋರ್ವನ ಭವಿಷ್ಯವನ್ನು ನುಡಿದಿದ್ದಾರೆ. ಹೌದು ವಿಚಿತ್ರವೆನಿಸಿದರು ಸತ್ಯ, ವಿಪಕ್ಷನಾಯಕ ಸಿದ್ದರಾಮಯ್ಯ ಈಗಾಗಲೇ ಕೋಲಾರ ಕ್ಷೇತ್ರದಿಂದ ಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಬೇರೆ ಬೇರೆ ಕ್ಷೇತ್ರಗಳ ಅಭಿಮಾನಿಗಳು ನಮ್ಮ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ದುಂಬಾಲು ಬಿದ್ದಿದ್ದಾರೆ. ಆದರೆ ಮಂಡ್ಯದಲ್ಲಿ ಮಾತ್ರ ಉಲ್ಟಾ ಆಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡಲೇ ಬೇಕು, ಒಂದು ಕ್ಷೇತ್ರದಿಂದ ಸ್ಪರ್ಧಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಪೂಜಾರಿ ಮೈ ಮೇಲೆ ಬಂದ ಆದಿನಾಡು ಚಿಕ್ಕಮ್ಮ ದೇವಿ, ಸಿದ್ದು ಪುತ್ರ ಯತೀಂದ್ರಗೆ ಸಂದೇಶ ನೀಡಿದೆ. ಬಾಹುಬಲ ಎರೆಡು ಕಡೆ ಚಾಚಲೇ ಬೇಕು ಎಂಬುವುದಾಗಿ ವಿಚಿತ್ರ ನುಡಿಯನ್ನು ನುಡಿದಿದ್ದಾರೆ ದೇವಿ.
ಸಿದ್ದರಾಮಯ್ಯ ಪುತ್ರ, ಶಾಸಕ ಯತೀಂದ್ರ ಸಿದ್ಧರಾಮಯ್ಯ ಕಳೆದವಾರ ಮಂಡ್ಯ ಜಿಲ್ಲೆಯ ಮಳವಳ್ಳಿಯ ಚೊಟ್ಟನಹಳ್ಳಿ ದೇವಾಲಯಕ್ಕೆ ತೆರಳಿದ್ದರು. ಯತೀಂದ್ರ ಸಿದ್ದರಾಮಯ್ಯ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು. ಈ ವೇಳೆ ಪೂಜಾರಿ ಮೈ ಮೇಲೆ ಬಂದ ಆದಿನಾಡು ಚಿಕ್ಕಮ್ಮ ದೇವಿ “ಬಾಹುಬಲ ಎರೆಡು ಕಡೆ ಚಾಚಲೇ” ಎಂದು ಸಂದೇಶಕೊಟ್ಟಿದೆ. ಆದಿನಾಡು ಚಿಕ್ಕಮ್ಮ ದೇವಿ ಕೊಟ್ಟ ಸಂದೇಶ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸದ್ಯ ಫುಲ್ ವೈರಲ್ ಆಗಿದೆ.http://ಸಾಲಕ್ಕೆ ಹೆದರಿ ಸಾವಿಗೆ ಶರಣಾಗಬೇಡಿ ಎಂದು ಅನ್ನದಾತರಿಗೆ ಧೈರ್ಯ ಹೇಳಿದ ಕುಮಾರಸ್ವಾಮಿ
ಆದರೆ ಇದೀಗ ಇದೇ ವಿಚಾರ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಹೌದು ರಾಜ್ಯದಲ್ಲೀಗ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ನಿಲ್ಲುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಇತ್ತೀಚೆಗಷ್ಟೇ ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.ಆದರೆ ಇದೀಗ ದೇವಿಯ ನುಡಿಯಂತೆ ಟಗರು ನಡೆಯನ್ನು ಬದಲಿಸುತ್ತಾರಾ ಎರಡು ಕ್ಷೇತ್ರದಲ್ಲಿ ಚುನಾವಣೆಗೂ ನಿಲ್ಲುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಯತೀಂದ್ರ ಕೂಡಾ ಪ್ರತಿಕ್ರಿಯಿಸಿದ್ದು ಭವಿಷ್ಯವಾಣಿ ಬಗ್ಗೆ ತಂದೆಗೆ ತಿಳಿದಿಲ್ಲ ಎರಡು ಕ್ಷೇತ್ರದ ಬಗ್ಗೆ ಹೈಕಮಾಂಡ್ ನಲ್ಲಿ ಚರ್ಚೆ ಮಾಡಿ ನಂತರ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಈ ಬಗ್ಗೆ ತಂದೆಯ ಅಭಿಪ್ರಾಯವೂ ತಿಳಿದಿಲ್ಲ ಎಂಬುವುದಾಗಿ ಹೇಳಿಕೆ ನೀಡಿದ್ದಾರೆ.
ಒಟ್ಟಾರೆ ಇದಕ್ಕೆ ಸಿದ್ದರಾಮಯ್ಯರೇ ಪ್ರತಿಕ್ರಿಯೆ ನೀಡಿದ ಬಳಿಕ ಸ್ಪಷ್ಟ ಉತ್ತರ ಸಿಗಲಿದೆ.
ಸಾಲಕ್ಕೆ ಹೆದರಿ ಸಾವಿಗೆ ಶರಣಾಗಬೇಡಿ ಎಂದು ಅನ್ನದಾತರಿಗೆ ಧೈರ್ಯ ಹೇಳಿದ ಕುಮಾರಸ್ವಾಮಿ
ಮೆಟ್ರೋ ಕಾಮಗಾರಿಯಿಂದ ಮತ್ತೊಂದು ದುರಂತ…!ಎಚ್ಚೆತ್ತುಕೊಳ್ಳದ ರಾಜಕೀಯ ನಾಯಕರು..?!