Political News: ಶುಕ್ರವಾರ ಮಂಡಿಸಿದ ಬಜೆಟ್ ಇದೀಗ ಕಮಲಪಡೆಯ ಕೆಂಗಣ್ಣಿಗೆ ಗುರಿಯಾಗಿದೆ. ಪ್ರತಿಯೊಬ್ಬರು ಇದೀಗ ಬಜೆಟ್ ಕುರಿತು ವಿರುದ್ಧ ಹೇಳಿಕೆ ನೀಡಲು ಪ್ರಾರಂಭಿಸಿದ್ದಾರೆ.ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿದ್ದರಾಮಯ್ಯ ನೀತಿಗಳನ್ನು ಟೀಕೆ ಮಾಡುತ್ತಾ ಜನರು ಅವರಿಗೆ ನೀಡಿದ ಅವಕಾಶಗಳನ್ನು ದುರುಪಯೋಗ ಮಾಡುತ್ತಿದ್ದಾರೆ. ಯಾವುದೇ ರೀತಿಯ ಜನಪರ ಮಂಡನೆ ಘೋಷಣೆಯಾಗಿಲ್ಲ. ಹಾಗು ಸಿದ್ದರಾಮಯ್ಯದು ಹಿಟ್ಲರ್ ನೀತಿ ಎಂಬುವುದಾಗಿ ಬಹುವಾಗಿಯೇ ಸಿದ್ದು ಸರಕಾರದ ಬಗ್ಗೆ ಟೀಕಾ ಪ್ರಹಾರವನ್ನೇ ಮಾಡಿದ್ದಾರೆ. ನೇರವಾಗಿ ಕೇಂದ್ರ ಸರಕಾರವನ್ನು ಬೈಯೋದನ್ನೇ ಕಾಯಕವಾಗಿಸಿದ್ದಾರೆ. ಜನರ ತೀರ್ಪಿಗೆ ಮೋಸ ಮಾಡುತ್ತಿದ್ದಾರೆ ಎಂಬುವುದಾಗಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.
Siddaramaiha government: ಸರಕಾರದ ಆರನೇ ಗ್ಯಾರಂಟಿ ಅಲ್ಪಸಂಖ್ಯಾತರ ಓಲೈಕೆಯ ಬಜೆಟ್…