State News:
ಸಿದ್ದರಾಮಯ್ಯ ಆರ್ ಎಸ್ ಎಸ್ ವಿಚಾರವಾಗಿ ಹೇಳಿದಂತಹ ಹೇಳಿಕೆಯಿಂದ ಕೇಸರಿ ಕಳಿಗಳು ಸಿದ್ದು ವಿರುದ್ಧ ಗರಂ ಆಗಿದ್ದಾರೆ.ಪಿಎಫ್ ಐ ಬ್ಯಾನ್ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಆರ್ ಎಸ್ ಎಸ್ ಕೂಡಾ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದೆ. ಅದನ್ನೂ ಬ್ಯಾನ್ ಮಾಡಬೇಕು ಎಂಬ ಹೇಳಿಕೆ ನೀಡಿದ್ರು. ಇದಕ್ಕೆ ವಿರುದ್ಧವಾಗಿ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಸಿದ್ದು ವಿರುದ್ಧವಾಗಿ ಕೆ.ಎಸ್ ಈಶ್ವರಪ್ಪ ಮಾತನಾಡಿ ಸಿದ್ದರಾಮಯ್ಯ ಜಿನ್ನಾ ಸಂತತಿ ಅವರು ಜಿನ್ನಾ ರಕ್ತ ನಾವೆಲ್ಲ ಕನಕದಾಸ ಸಂಗೊಳ್ಳಿ ರಾಯಣ್ಣ ರಕ್ತವಾದರೆ ಅವರು ಜಿನ್ನಾ ರಕ್ತ ಸಿದ್ದರಾಮಯ್ಯ ದೇಶಕ್ಕೆ ವಿಲನ್ ಅಷ್ಟೇ ಏಕೆ ಡಿಕೆಶಿ ಗೂ ವಿಲನ್ ಕಾಂಗ್ರೆಸ್ ಗೂ ಸಿದ್ದರಾಮಯ್ಯ ವಿಲನ್ ಅವರು ಜನತೆಗೆ ಕ್ಷಮೆ ಕೇಳಬೇಕು ಎಂಬುವುದಾಗಿ ಸಿದ್ದು ವಿರುದ್ಧ ಹರಿಹಾಯ್ದಿದ್ದಾರೆ.
ಡಿ.ಕೆ ಶಿವಕುಮಾರ್ ಮೇಲೆ ಸಿಬಿಐ ಗೆ ಬಹಳ ಪ್ರೀತಿಯಂತೆ ..?! ಡಿ.ಕೆ.ಶಿ ಹೀಗೆ ಹೇಳಿದ್ಯಾಕೆ..?!