Sunday, September 8, 2024

Latest Posts

“ಸೋನಿಯಾ ಕಾಲು ಹಿಡಿದು ಸಿಎಂ ಆಗಿದ್ದ ಸಿದ್ರಾಮಣ್ಣ”: ನಳಿನ್‍ಕುಮಾರ್ ಕಟೀಲ್

- Advertisement -

State News:

ಬೆಂಗಳೂರು: ಇಂದಿರಾ ಗಾಂಧಿಯನ್ನು ಮೊದಲು ಬೈಯ್ಯುತ್ತಿದ್ದ ಸಿದ್ರಾಮಣ್ಣನವರು ಕೊನೆಗೆ ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಆದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಟೀಕಿಸಿದರು.
ಧಾರವಾಡದಲ್ಲಿ ಇಂದು ‘ಜನಸಂಕಲ್ಪ’ ಯಾತ್ರೆಯ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆದರೆ, ಯಡಿಯೂರಪ್ಪ ಅವರು ಹಾಗಲ್ಲ. ಅವರು ಈ ರಾಜ್ಯದಲ್ಲಿ ಮಾಡಿದಷ್ಟು ಪಾದಯಾತ್ರೆಗಳು, ಸೈಕಲ್ ಯಾತ್ರೆಗಳು ಮತ್ತು ಹೋರಾಟಗಳನ್ನು ಇವತ್ತು ಯಾರೂ ಮಾಡಿಲ್ಲ. ಅದು ಯಾವ ನಾಯಕರಿಂದಲೂ ಸಾಧ್ಯವೂ ಇಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಇವತ್ತಿನ ಸ್ಥಿತಿಗತಿಗಳನ್ನು ನೋಡಿದಾಗ ಅವರಿಗೆ ಕೇವಲ ಅರಳುಮರಳಲ್ಲ. ಸಿದ್ರಾಮಣ್ಣ ಅಧಿಕಾರ ಕಳಕೊಂಡು ಹುಚ್ಚರಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ ಕೆಟ್ಟ ಕೆಟ್ಟ ಶಬ್ದದಿಂದ ಏಕವಚನದಿಂದ ಮಾತನಾಡಿ ದುರಹಂಕಾರ ತೋರುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಡಿ.ಕೆ.ಶಿವಕುಮಾರ್ – ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುವ ಭಯ ಅವರನ್ನು ಕಾಡುತ್ತಿದೆ. ಅಧಿಕಾರ ಕಳಕೊಂಡು ಹುಚ್ಚರಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.
ರಾಹುಲ್ ಗಾಂಧಿ ಕೇವಲ ಸಂಸದರಷ್ಟೇ. ಕಾಂಗ್ರೆಸ್ ನಾಯಕರಿರಬಹುದು. ಮೋದಿಯವರು ಈ ದೇಶದ ಪ್ರಧಾನಮಂತ್ರಿ. ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದಾಗ ಅವರನ್ನು ಬಿಜೆಪಿ ಹಿರಿಯ ಮುಖಂಡ- ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿಯವರು ಯಾವತ್ತೂ ಏಕವಚನದಿಂದ ಟೀಕಿಸಿರಲಿಲ್ಲ. ವಿರೋಧ ಪಕ್ಷಗಳ ಮಾದರಿ ನಡವಳಿಕೆಗೆ ಅಟಲ್ ಬಿಹಾರಿ ವಾಜಪೇಯಿ ಅವರು ಮಾದರಿ. ಸಿದ್ರಾಮಣ್ಣನ ವಿರುದ್ಧ ಯಡಿಯೂರಪ್ಪರವರು ಹೇಳಿದ್ದು ಸರಿ ಇದೆ ಎಂದು ಸಮರ್ಥಿಸಿದರು.
ಶಬ್ದಗಳ ಬಳಕೆ ಮಾಡುವುದನ್ನು ಸಿದ್ರಾಮಣ್ಣ ಕಲಿಯಲಿ. ಅವರು ಗೌರವಯುತವಾಗಿ ನಡೆದರೆ ಎಲ್ಲರೂ ಗೌರವದಿಂದ ನಡೆದುಕೊಳ್ಳುತ್ತಾರೆ. ಅವರು ಬೇಜವಾಬ್ದಾರಿಯಿಂದ ನಡೆದರೆ ಅನಿವಾರ್ಯವಾಗಿ ಬೇಜವಾಬ್ದಾರಿ ಉತ್ತರ ಕೊಡಬೇಕಾಗುತ್ತದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಸಿದ್ರಾಮಣ್ಣನನ್ನು ಕಂಡರೆ ನಮಗ್ಯಾಕೆ ಭಯ ಇರಬೇಕು? ಡಿಕೆಶಿ, ಪರಮೇಶ್ವರ್, ಖರ್ಗೆಗೆ ಭಯ ಇರಬೇಕು. ಅವರೆಲ್ಲರ ಭಯ ಇವರಿಗೆ, ಇವರ ಭಯ ಅವರಿಗೆ ಇದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಕಾಂಗ್ರೆಸ್ ಈಗ ಪಾದಯಾತ್ರೆ ಆರಂಭಿಸಿದೆ. ನಮ್ಮ ಪಕ್ಷ ಬೆಳೆದಿರುವುದೇ ಯಾತ್ರೆಯ ಮುಖಾಂತರ. ಸಿದ್ರಾಮಣ್ಣ ಯಾರ್ಯಾರದೋ ಕಾಲು ಹಿಡಿದು, ಭಿಕ್ಷೆ ಬೇಡಿ ಮುಖ್ಯಮಂತ್ರಿ ಆದವರು. ದೇವೇಗೌಡರ ಕಾಲಿಗೆ ಅಡ್ಡ ಬಿದ್ದು, ಬೆಳೆದವರು. ಮೊದಲು ಅವರ ಕಾಲಡಿಯಲ್ಲಿ ಕುಳಿತು ನಂತರ ಕಾಲಿನಲ್ಲಿ ತುಳಿದವರು ಎಂದು ಟೀಕಿಸಿದರು.
ಹಿಜಾಬ್ ವಿಚಾರ ನ್ಯಾಯಾಲಯದ ಮುಂದೆ ಇರುವ ಕಾರಣ ನಾನು ಅದರ ಬಗ್ಗೆ ಚರ್ಚಿಸುವುದಿಲ್ಲ ಎಂದು ಅವರು ತಿಳಿಸಿದರು.

- Advertisement -

Latest Posts

Don't Miss