Monday, December 23, 2024

Latest Posts

ಸಿಡಿದೆದ್ದ ಸಿದ್ದರಾಮಯ್ಯ…! ಕೇಸರಿ ಕಲಿಗಳ ಸವಾಲ್ ಗೆ ಸಿದ್ದು ಕೌಂಟರ್..!

- Advertisement -

Banglore News:

ಸಿದ್ದರಾಮಯ್ಯ ಕೊಡಗು ಭೇಟಿ ಹಿನ್ನಲೆ ಅಲ್ಲಿ ಸಿದ್ದು ಕಾರಿಗೆ ಮೊಟ್ಟೆ ಒಡೆದು ಪ್ರತಿಭಟನೆ ಮಾಡಲಾದ ವಿಚಾರ ರಾಜ್ಯ ರಾಜಕೀಯದಲ್ಲೇ  ಸಂಚಲನ ಮೂಡಿಸಿತು.ತದ ನಂತರ ಸಿದ್ದು ಮಾಂಸಾಹಾರ ವಿಚಾರವಾಗಿ ದೊಡ್ಡ ಹೈಡ್ರಾಮವೇ ನಡೆಯಿತು. ಕೇಸರಿ ಕಲಿಗಳು ಸಿದ್ದರಾಮಯ್ಯಗೆ ಕೌಂಟರ್ ಮೇಲೆ ಕೌಂಟರ್ ಕೊಡುತ್ತಲೇ ಬಂದರು. ಆದ್ರೆ ಇದೀಗ ಸಿದ್ದರಾಮಯ್ಯ ಕೇಸರಿ ಪಡೆಯ ವಿರುದ್ದ ಸಿಡಿದೆದ್ದಿದ್ದಾರೆ.

ಮೊಟ್ಟೆ ಮಾಂಸ ವಿಚಾರವಾಗಿ ಇಷ್ಟೊಂದು ದೊಡ್ಡ ಚರ್ಚೆ ಅಗತ್ಯವೇ ಇಲ್ಲ.ನಾನು ಮಡಿಕೇರಿಯಲ್ಲಿ ಮಾಂಸವೇ ತಿಂದಿಲ್ಲ.ಅಲ್ಲಿ ತಿಂದಿದ್ದು ಅಕ್ಕಿ ರೊಟ್ಟಿ ಹಾಗು ಕನಿಲೆ ಕರಿ ಸುಮ್ಮನೆ ಮಾಂಸದ ವಿಚಾರವಾಗಿ ಚರ್ಚೆ ಮಾಡುತ್ತಿದ್ದಾರೆ. ಮಾಂಸ ತಿನ್ನೋದು ಬಿಡೋದು ಅವರಿಗೆ ಬಿಟ್ಟಿದ್ದೆ. ಅದು ಚರ್ಚೆ ಮಾಡುವ ವಿಚಾರವೇ ಅಲ್ಲ, ಎಷ್ಟೋ ಜನ ಮಾಂಸ ತಿಂದು ತಿನ್ನದೆ ಹೋಗ್ತಾರೆ. ಕೆಲವೆಡೆ ಮಾಂಸವನ್ನೇ ದೇವರಿಗೆ ಎಡೆ ಇಡುತ್ತಾರೆ. ಹಂದಿ ಮಾಂಸ ತಿನ್ನಿ ಅಂದವರೇ ತಿನ್ನಲಿ ನಾನು ದನದ ಮಾಂಸ  ಹಂದಿ ಮಾಂಸ ತಿನ್ನುವುದಿಲ್ಲ  ತಿನ್ನುವವರ ವಿರುದ್ಧ ನಾನಿಲ್ಲಎಂಬುವುದಾಗಿ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದರು.

 

ಮೈಸೂರು: ಸಾವರ್ಕರ್ ರಥ ಯಾತ್ರೆಗೆ ಚಾಲನೆ ನೀಡಿದ ಬಿಎಸ್ ವೈ

ಕೊಡಗು ಚಲೋ ಮುಂದೂಡಿತಾ ಕಾಂಗ್ರೆಸ್..?! ಸಿದ್ದರಾಮಯ್ಯ ಹೇಳಿದ್ದೇನು..?!

ನನಗೇನು ಭಯವಿಲ್ಲ…! ಸಚಿವರು ಹೀಗೆ ಹೇಳಿದ್ಯಾಕೆ…?!

- Advertisement -

Latest Posts

Don't Miss