Monday, December 11, 2023

Latest Posts

ಉದ್ಯಮಿ ಸಿದ್ದಾರ್ಥ್ ನಾಪತ್ತೆಗೂ ಮುನ್ನಾ ವಿನಯ್ ಗುರೂಜಿ ನುಡಿದ ಭವಿಷ್ಯವೇನು..?

- Advertisement -

ಚಿಕ್ಕಮಗಳೂರು: ನಿಗೂಢವಾಗಿ ನಾಪತ್ತೆಯಾಗಿರುವ ಮಾಜಿ ಸಿಎಂ ಎಸ್.ಎಂ ಕೃಷ್ಣ ಅಳಿಯ, ಉದ್ಯಮಿ ಸಿದ್ದಾರ್ಥ್ ಪತ್ತೆಗಾಗಿ ತನಿಖಾ ತಂಡ ಕಾರ್ಯಾಚರಣೆ ನಡೆಸುತ್ತಿರೋ ಮಧ್ಯೆ ಇದೀಗ ಗೌರಿಗದ್ದೆಯ ವಿನಯ್ ಗುರೂಜಿ ಸಿದ್ದಾರ್ಥ್ ಕುರಿತಾಗಿ ಈ ಮೊದಲೇ ಭವಿಷ್ಯ ನುಡಿದಿದ್ದು ಬಹಿರಂಗವಾಗಿದೆ.

ಯಶಸ್ವಿ ಉದ್ಯಮಿ ಅಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದೇ ಪದೇ ಸುದ್ದಿಯಾಗುತ್ತಿದ್ದ ಉದ್ಯಮಿ ಸಿದ್ದಾರ್ಥ್ ಇಂದು ವ್ಯವಹಾರಿಕ ನಷ್ಟದಿಂದಾಗಿ ಬೇಸತ್ತು ನಿಗೂಢವಾಗಿ ನಾಪತ್ತೆಯಾಗಿರೋ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸದಾ ಲವಲವಿಕೆಯಿಂದಿರುತ್ತಿದ್ದ ಸಿದ್ದಾರ್ಥ್ ಯಾವುದೇ ಕಾರಣಕ್ಕೂ ಧೃತಿ ಗೆಡುವ ವ್ಯಕ್ತಿಯೇ ಅಲ್ಲ ಅಂತ ಅವರ ಸ್ನೇಹಿತರೂ ಕೂಡ ಹೇಳಿಕೆ ನೀಡಿದ್ದಾರೆ. ಆದ್ರೆ ನಾಪತ್ತೆಯಾಗಿ ಸುಮಾರು 16 ಗಂಟೆಗಳೇ ಕಳೆದರೂ ಸಿದ್ದಾರ್ಥ್ ಎಲ್ಲಿದ್ದಾರೆ ಅನ್ನೋ ಬಗ್ಗೆ ಸ್ಪಷ್ಟ ಮಾಹಿತಿ ಇವರೆಗೂ ಲಭ್ಯವಾಗಿಲ್ಲ. ಆದರೆ ಮೊನ್ನೆ ಭಾನುವಾರ ಚಿಕ್ಕಮಗಳೂರಿನ ಗೌರಿಗದ್ದೆಯ ವಿನಯ್ ಗುರೂಜಿ ಸಿದ್ದಾರ್ಥ್ ಪುತ್ರ ಅಮರ್ತ್ಯನಿಗೆ ಭವಿಷ್ಯವಾಣಿಯನ್ನು ನುಡಿದ್ದರಂತೆ.

ಹೌದು, ಇತ್ತೀಚೆಗೆ ತೀವ್ರ ಒತ್ತಡಲ್ಲಿದ್ದವರಂತೆ ಕಂಡುಬರುತ್ತಿದ್ದ ಉದ್ಯಮಿ ಸಿದ್ದಾರ್ಥ್ ಕುರಿತು ಕುಟುಂಬಸ್ಥರೂ ಕೂಡ ತಲೆ ಕೆಡಿಸಿಕೊಂಡಿದ್ದರು. ಹೀಗಾಗಿ ಮೊನ್ನೆ ಭಾನುವಾರ ಸಿದ್ದಾರ್ಥ್ ಪುತ್ರ ಅಮರ್ತ್ಯ ವಿನಯ್ ಗುರೂಜಿ ಬಳಿ ಸಲಹೆ ಪಡೆಯಲು ಭೇಟಿ ತೆರಳಿದ್ದರು. ಆಗ ವಿನಯ್ ಗುರೂಜಿ ಇನ್ನುಮುಂದೆ ನಿನಗೆ ಜವಾಬ್ದಾರಿಗಳು ಹೆಚ್ಚಾಗಲಿದ್ದು, ಮಾನಸಿಕವಾಗಿ ಸಿದ್ಧವಿರುವಂತೆ ತಿಳಿಸಿದ್ದಾರೆ. ಅಲ್ಲದೆ ಕುಟುಂಬಸಹಿತವಾಗಿ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ಬರುವಂತೆಯೂ ವಿನಯ್ ಗುರೂಜಿ ಸಲಹೆಯನ್ನೂ ನೀಡಿದ್ದರಂತೆ. ಗುರೂಜಿ ಹೇಳಿದ್ದ ಈ ಮಾತು ಸಿದ್ದಾರ್ಥ್ ಗೆ ಎದುರಾಗುವ ಅಪಾಯ ಅಥವಾ ಸಮಸ್ಯೆಗಳ ಕುರಿತಾಗಿ ಸೂಚ್ಯವಾಗಿ ನುಡಿದಿದ್ದ ಭವಿಷ್ಯ ಅನ್ನೋದು ಅಂದು ಪುತ್ರ ಅಮರ್ತ್ಯನಿಗೆ ತಿಳಿದಿರಲ್ಲಿಲ್ಲ. ಇನ್ನು ಸಿದ್ಧಾರ್ಥ್ ಗಾಗಿ ನೇತ್ರಾವತಿ ನದಿಯಲ್ಲಿ ನೂರಾರು ಮಂದಿ ಹುಡುಕಾಟ ನಡೆಸಿದ್ದು, ಪೊಲೀಸರೂ ಸಹ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿದ್ದಾರೆ.

- Advertisement -

Latest Posts

Don't Miss