‘ಸಿದ್ದರಾಮಯ್ಯ ಸೋಲಿಸಿ’ಎಂಬ ಕರಪತ್ರ  ಹಂಚಿಕೆ  

political story :

ಸಿದ್ದರಾಮಯ್ಯ ಚುನಾವಣಾ ಕ್ಷೇತ್ರದ ಆಯ್ಕೆ ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ಅಳೆದು ತೂಗಿ ಎಚ್ಚರಿಕೆ ಹೆಜ್ಜೆ ಹಿಟ್ಟಿದ್ದ ಸಿದ್ದು ಬಾದಾಮಿ ತೊರೆದು ಕೋಲಾರದಲ್ಲಿ ಸ್ಪರ್ಧಿಸುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ರು. ಆದರೆ ಸಿದ್ದರಾಮಯ್ಯ ವಿರುದ್ಧವೇ ಈಗ ಕೋಲಾರದಲ್ಲಿ ಜಾಗೃತಿ ಅಭಿಯಾನ ನಡೆಯುತ್ತಿದೆ.  ಕೋಲಾರ ಕ್ಷೇತ್ರದ ದಲಿತ ಮತದಾರರಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಸೋಲಿಸಿ ಎಂಬ ಕರಪತ್ರ ಹಂಚಿ ಅಭಿಯಾನ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನ ಸೋಲಿಸುವ ಮೂಲಕ ದಲಿತರ ಸ್ವಾಭಿಮಾನ ಮೆರೆಯೋಣ ಎಂಬ ಸ್ಲೋಗನ್ಸ್ ಇರುವ ಕರಪತ್ರ ಇದಾಗಿದ್ದು ಕೋಲಾರಾದ್ಯಾಂತ ಸಿದ್ದು ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಅಹಿಂದ ನಾಯಕ, ಮಾಸ್ ಲೀಡರ್ ಅಂದೆಲ್ಲಾ ಎಲ್ಲಾ ಸಮುದಾಯದವರು ಒಪ್ಪುವ ನಾಯಕತ್ವ ಹೊಂದಿರುವವರು. ಆದರೂ ತಮ್ಮದೇ ಪಕ್ಷದ ನಾಯಕ ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರನ್ನ ಹಿನ್ನಡೆಯುವಂತೆ ಮಾಡಿದ್ದಾರೆ ಎಂಬ ಆರೋಪಗಲು ಕೇಳಿ ಬರುತ್ತಿವೆ . ಅಲ್ಲದೇ ಸಿಎಂ ಸ್ಥಾನದ ಸ್ಪರ್ಧೆಯಲ್ಲಿದ್ದ ಜಿ.ಪರಮೇಶ್ವರ್ ಚುನಾವಣೆಯಲ್ಲಿ ಸೋಲಿಸಿ ದಲಿತ ನಾಯಕ ಸಿಎಂ ನಾಯಕನಾಗುವುದನ್ನ ತಪ್ಪಿಸಿದ್ರು ಅನ್ನೋ ಸಾಕಷ್ಚು ಮಾತುಗಳು ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಸಿದ್ದು ಸೋಲಿಸಿ ಎಂಬ ಅಭಿಯಾನ ಕೋಲಾರದಲ್ಲಿ ಶುರುವಾಗಿರುವುದರಿಂದ ದಲಿತ ಮತಗಳು ಎಲ್ಲಿ ತಪ್ಪುತ್ತದೆಯೋ ಎಂಬ ಟೆನ್‌ಕ್ಷನ್ ಸಿದ್ದರಾಮಯ್ಯಗೆ ಶುರುವಾಗಿದೆ.

ಭೂತದ ಬಾಯಿಯಲ್ಲಿ ಭಗವದ್ಗೀತೆ-ಬಿ.ಕೆ ಹರಿಪ್ರಸಾದ್

ರಾಜ್ಯ ರಾಜಕಾರಣದಲ್ಲಿ ಪಕ್ಷಗಳ ನಡುವೆ ವಾಕ್ಸಮರ

ವಿಜಯಪುರಕ್ಕೆ ಜೆ ಪಿ ನಡ್ಡಾ ಬೇಟಿ

About The Author