Saturday, December 21, 2024

Latest Posts

ಸಿಧು ಮೂಸೆವಾಲಾ ಹತ್ಯೆ ಪ್ರಕರಣ; ಆರೋಪಿಗಳ ಬಂಧನ!

- Advertisement -

ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಶೂಟರ್ ಸಂತೋಷ್ ಜಾಧವ್ ಮತ್ತು ಶಂಕಿತ ಆರೋಪಿ ಜಾಧವ್ ಅವರ ಸಹಾಯಕ ನವನಾಥ್ ಸೂರ್ಯವಂಶಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ಸಂತೋಷ್ ಜಾಧವ್ ತನ್ನ ಗುರುತನ್ನು ಮರೆಮಾಚಲು ತಲೆ ಬೋಳಿಸಿಕೊಂಡಿದ್ದನು. ಆತನನ್ನು ಗುಜರಾತ್‌ನ ಕಚ್ ಜಿಲ್ಲೆಯ ಮಾಂಡವಿಯಿಂದ ಪುಣೆ ಪೊಲೀಸರು ಬಂಧಸಿ, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಮಂಚಾರ್ ಪೊಲೀಸ್ ಠಾಣೆಯಲ್ಲಿ 2021 ರಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನಾಗಿರುವ ಸಂತೋಷ್ ಜಾಧವ್ ಮತ್ತು ಸಹಾಯಕ ಸೂರ್ಯವಂಶಿಯನ್ನು ಪೊಲೀಸರ ತಂಡ ಬಂಧಿಸಿದೆ ಎಂದು ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಂಧಿತ ಜಾದವ್‌ ಮತ್ತು ಸೂರ್ಯವಂಶಿ ಅವರನ್ನು ಭಾನುವಾರ ಮಧ್ಯರಾತ್ರಿ ಪುಣೆಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೂನ್ 20 ರವರೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಇನ್ನು ಕಳೆದ ವಾರ, ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಸಂತೋಷ್ ಜಾಧವ್ (23) ಮತ್ತು ಪುಣೆ ನಿವಾಸಿ ಸಿದ್ಧೇಶ್ ಕಾಂಬ್ಳೆ ಅಲಿಯಾಸ್ ಸೌರವ್ ಅಲಿಯಾಸ್ ಮಹಾಕಾಲ್ ಹೆಸರುಗಳು ಕೇಳಿಬಂದಿದ್ದವು.

 

- Advertisement -

Latest Posts

Don't Miss