Tumakuru News: ತುಮಕೂರು: ತುಮಕೂರಿನ ಸಿದ್ದಗಂಗಾ ಮಠದಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದು 2 ವರ್ಷ 9 ತಿಂಗಳಾಯ್ತು, ಬಂದ ಪುಟ್ಟ ಹೋದ ಪುಟ್ಟ ಹಾಗಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೊ ಹಾಗೆ. ಮುಖ್ಯ ಮಂತ್ರಿ ಉಪ ಮುಖ್ಯಮಂತ್ರಿಗಳ ಬೀದಿ ಜಗಳದಿಂದ ರೈತರು ಬೀದಿ ಪಾಲಾಗಿದ್ದಾರೆ. ಭತ್ತ ಮೆಕ್ಕೆ ಜೋಳ ಇತರೆ ಬೆಳೆಗಳಿಗೆ ಕೇಂದ್ರ ಸರ್ಕಾರ ಎಂಎಸ್ ಪಿ ಧರ ಬೆಂಬಲ ಬೆಲೆ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿ ತೋರಿಸ್ತಿದೆ. ಮೆಕ್ಕೆಜೋಳ ಬೆಳೆದ ರೈತರು ರಸ್ತೆಲಿ ಸುರಿತಿದ್ದಾರೆ. ಇವರು ಪ್ರತಿದಿನ ಕಚ್ಚಾಡ್ತಿದ್ದಾರೆ. ಇವರ ಆಂತರಿಕ ಕಚ್ಚಾಟದಿಂದ ಸರ್ಕಾರ ಪಥನ ಆಗಬಹುದು ಅನ್ನಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ರೇಕ್ ಫಾಸ್ಟ್ ಮೀಟಿಂಗ್ ಆಯ್ತು. ಮುಖ್ಯಮಂತ್ರಿ ಮನೆಯಲ್ಲಿ ಉಪಮುಖ್ಯಮಂತ್ರಿಗೆ ಸ್ವಾಗತ. ಇಡ್ಲಿ ವಡೆ, ಕಾರಾಬಾತ್ ಕೇಸರಿ ಬಾತ್. ಎರಡು ದಿನ ಬಿಟ್ಟು ಉಪಮುಖ್ಯಮಂತ್ರಿ ಮನೆಯಲ್ಲಿ ಮುಖ್ಯಮಂತ್ರಿ ಡಿನ್ನರ್ ಮೀಟಿಂಗ್. ಮುಖ್ಯ ಮಂತ್ರಿ ಗಳು ಹೇಳಿದ್ರು ನಂಗೆ ಬೆಂಗಳೂರು ಕೋಳಿ ಸರಿ ಅನಿಸಲ್ಲ. ಕನಕಪುರದಿಂದ ನಾಟಿಕೋಳಿ ತರಿಸಿ ಟಿಫನ್ ಗೆ ಅಂತಾ ಹೇಳಿದ್ರು ಅಲ್ಲಿ ತಟ್ಟೆ ಇಡ್ಲಿ ಚಿಕನ್ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ಕಾಂಗ್ರೇಸ್ ಹೈಕಮಾಂಡ್ ಬಹಳ ಬುದ್ದಿವಂತಿಕೆ ಮಾಡ್ತಿದಾರೆ. ಸಿದ್ದರಾಮಯ್ಯ ಸುಪುತ್ರ ಬೆಂಬಲಿಗರಿಗೆ ಅಭದ್ರತೆ ಕಾಡ್ತಿದೆ. ಅದಕ್ಕಾಗಿ ಯತೀಂದ್ರ ಸಿದ್ದರಾಮಯ್ಯ ನವರುಪ್ರತಿದಿನ ಹೇಳಿಕೆ ಕೊಡ್ತಿದ್ದಾರೆ. ಒಂದು ಕಡೆ ಡಿಕೆಶಿ ಬೆಂಬಲಿಗರು ರಾಮನಗರ ಶಾಸಕರು ಅಧಿವೇಶನ ಮುಗಿದ ಮೇಲೆ ಕಾದು ನೋಡಿ ಎನ್ನುತ್ತಿದ್ದಾರೆ. ಬಹುಶಃ ನಂಗೆ ಎಲ್ಲೋ ಒಂದು ಕಡೆ ಮಾಹಿತಿ ಬಂದಿದೆ. ಹೈಕಮಾಂಡ್ ಏನ್ಮಾಡ್ತಿದೆ ಸಿದ್ದರಾಮಯ್ಯ ನವರ ಬಾಯಿಂದ ಡಿಕೆ ಶಿವಕುಮಾರ್ ಮುಂದಿನ ಮುಖ್ಯ ಮಂತ್ರಿ ಅಂತಾ ಹೇಳಿಸ್ತಾರೆ. ಅದಕ್ಕೊಸ್ಕರ ಈ ಸರ್ಕಸ್ ನಡೆಯುತ್ತಾ ಇದೆ.ಸರ್ಕಾರ ಅಸ್ಥಿರ ಆಗಿದೆ, ರೈತರ ವಿರೋಧಿ ಸರ್ಕಾರ ಅಂತಾ ನಾನ್ ಹೇಳಲಿಕ್ಕೆ ಇಚ್ಚೆ ಪಡ್ತಿನಿ.




