Sim Card :ಸಿಮ್ ಕಾರ್ಡ್​ ಒಂದು ಮೂಲೆ ಕತ್ತರಿಸಿರೋದು ಯಾಕೆ ಗೊತ್ತಾ..?!

Technology News :ಸಿಮ್ ಕಾರ್ಡ್​ ನಾವು ಬಳಸೊ ನಿತ್ಯ ಉಪಯೋಗಿಯಲ್ಲಿ ಇದೂ ಒಂದು ಆದ್ರೆ ಇದೆ  ಸಿಮ್ ನಲ್ಲಿರೋ  ಆ ಒಂದು ವಿಶೇಷತೆ ಬಗ್ಗೆ ಇಂದಿಗೂ ಕುತೂಹಲವೊಂದಿದೆ. ಸಿಮ್ ಕಾರ್ಡ್​ ಒಂದು ಮೂಲೆಯಲ್ಲಿ ಕಟ್ ಆಗಿರುತ್ತೆ ಆದ್ರೆ ಇದು ಯಾಕೆ ಅನ್ನೋದು ಇನ್ನೂ ಅನೇಕರಿಗೆ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿದೆ. ಹಾಗಿದ್ರೆ ಸಿಮ್ ಯಾಕೆ ಒಂದು ಮೂಲಡಯಲ್ಲಿ ಕಟ್ ಆಗಿರುತ್ತೆ ಹೇಳ್ತೀವಿ ಈ ಸ್ಟೋರಿಯಲ್ಲಿ……

ಸಿಮ್ ಕಾರ್ಡ್​ ಅನ್ನೋದು ಎಲ್ಲರ ಅಗತ್ಯ ವಸ್ತು. ಈ ಸಿಮ್ ಕಾರ್ಡ್​ ನ ಫುಲ್ ಫಾರಂ  ಬಗ್ಗೆ ಮೊದಲಾಗಿ ತಿಳಿದುಕೊಳ್ಳೋಣ ಸಿಮ್ ಅಂದ್ರೆ ಸಬ್ಸ್ಕ್ರೈಬರ್ ಐಡೆಂಟಿಟಿ ಮಾಡೆಲ್ .ಇದೊಂದು ಎಲೆಕ್ಟ್ರಾನಿಕ್ ಚಿಪ್ ಮೊಬೈಲ್ ಮತ್ತೆ ನೆಟ್ ವರ್ಕ್​ನ ಇದು  ಕನೆಕ್ಟ್ ಮಾಡುತ್ತೆ.

ಮೊದಲೆಲ್ಲಾ ಸಿಮ್ ಕಾರ್ಡ್​ ಅನ್ನೋ ಕಾನ್ಸೆಪ್ಟ್  ಇರಲಿಲ್ಲ  ಆದರೆ  ಒಬ್ಬ ವ್ಯಕ್ತಿ ಐಡೆಂಟಿಟಿ ಪತ್ತೆ  ಹಚ್ಚುವ  ಸಲುವಾಗಿ  ಆರಂಭ ವಾಗಿದ್ದೇ ಸಿಮ್ ತಯಾರಿ ಮಾಡೋದು. ಆದರೆ ಮೊದಲು ಯಾವುದೇ ರೀತಿಯ ಸಿಮ್ ಕಾರ್ಡ್ ನಲ್ಲಿ ಯಾವ  ಮೂಲೆಯೂ ಕಟ್ ಆಗಿರಲಿಲ್ಲ  4 ಮೂಲೆಗಳು ಒಂದೇ ರೀತಿಯಾಗಿದ್ದವು. ಮೊಬೈಲ್ ಬಳಕೆದಾರರು ಸಿಮ್ ಅನ್ನು ಮೊಬೈಲ್​ ಒಳಗೆ ನಿರ್ದಿಷ್ಟ ಸ್ಲಾಟ್​ನಲ್ಲಿ ಸ್ಥಾಪಿಸಲು ಕಷ್ಟಪಡುತ್ತಿದ್ದರು. ಪ್ರತಿ ಬಾರಿ ಮೊಬೈಲ್​ ಸ್ಲಾಟ್​ನಲ್ಲಿ ಸಿಮ್ ಅನ್ನು ಹಿಮ್ಮುಖವಾಗಿ ಹಾಕಲಾಗುತಿತ್ತು. ಆದರೆ ಅದನ್ನು ಹೊರತೆಗೆಯಲು ಮತ್ತು ಅದನ್ನು ಮತ್ತೆ ಹಾಕಲು ಕಷ್ಟವಾಗುತ್ತಿತ್ತು. ಸಿಮ್ ಅಳವಡಿಸಲು ಎದುರಾಗುವ ತೊಂದರೆಗಳನ್ನು ಕಂಡು ಟೆಲಿಕಾಂ ಕಂಪನಿಗಳು ಒಂದು ಮಹತ್ವದ ನಿರ್ಧಾರ ಕೈಗೊಂಡಿತು. ಅವರು ಸಿಮ್ ಕಾರ್ಡ್ ಅನ್ನು ಒಂದೇ ಬಾರಿಗೆ ಸರಿಯಾಗಿ ಒಳಗೆ ಕೂಡಿಸಲು ಅದರ ಮೂಲೆಯನ್ನು ಕತ್ತರಿಸುವುದಕ್ಕೆ ಅನುಮತಿ  ನೀಡಿದರು.

ಕಟ್ ಮಾಡಲು ಆರಂಭಿಸಿದ ನಂತರ ಸಿಮ್ ಕಾರ್ಡ್‌ಗಳ ವಿನ್ಯಾಸದಲ್ಲಿ ನಿಧಾನವಾಗಿ ಇನ್ನೂ ಕೆಲ ಬದಲಾವಣೆಗಳು ಆಗುತ್ತಲೇ ಇವೆ. ಈ ಹಿಂದೆ ಸಿಮ್ ಗಾತ್ರ ದೊಡ್ಡದಾಗಿತ್ತು. ಅದು ಈಗ ಅದು ತುಂಬಾ ಚಿಕ್ಕದಾಗಿ, ಕ್ಯೂಟ್​ ಆಗಿ  ಮೂಡಿಬಂದಿದೆ. ಏಕೆಂದರೆ ಈಗ ಬರುತ್ತಿರುವ ಮೊಬೈಲುಗಳಲ್ಲಿ ಸಣ್ಣ ಸಿಮ್ ಅನ್ನು ಮಾತ್ರ ಹೊಂದಿರುವಂತೆ ಸ್ಲಾಟ್​ ಮಾಡಲಾಗುತ್ತಿದೆ. ಸಿಮ್ ಹಳೆಯ ದೊಡ್ಡ ಗಾತ್ರದ ಪ್ಲೇಟ್ ಅನ್ನು ಒದಗಿಸಿದ್ದರೂ, ಟೆಲಿಕಾಂ ಕಂಪನಿಗಳು ಹಳೆಯ ಫೋನ್‌ನಲ್ಲಿ ಸಿಮ್ ಸೇರಿಸಲು ಮತ್ತೊಂದು ಸಿಮ್ ಕಾರ್ಡ್‌ನ ಫ್ರೇಮ್ ಅನ್ನು ಸೇರಿಸಲು ಮತ್ತು ಬಳಸಲು ಯೋಜನೆಯನ್ನೂ ಸಹ ಮಾಡಿವೆ.

Bihar : ಪ್ರಿಯಕರನ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಪೋಷಕರು

Narendra Modi : ಮಣಿಪುರದಲ್ಲಿ ಹೆಣ್ಣುಮಕ್ಕಳಿಗೆ ಆದ ಘಟನೆ ಎಂದಿಗೂ ಕ್ಷಮಿಸಲಾಗದು: ಮೋದಿ

Motorola : ಫ್ಲಿಪ್ ಕಾರ್ಟ್​ನಲ್ಲಿ ಮೋಟೊರೋಲೋ ಗೆ ಭರ್ಜರಿ  ಆಫರ್…!

About The Author