Friday, December 27, 2024

Latest Posts

ಎರಡೇ ನಿಮಿಷದಲ್ಲಿ ನಿದ್ರೆ ಮಾಡೋದು ಹೇಗೆ..?

- Advertisement -

ಒಂದು ದಿನ ನಿದ್ರೆ ಮಾಡಿಲ್ಲ ಅಂದ್ರೆ, ಮಾರನೇ ದಿನ ಕಿರಿಕಿರಿ, ಆಲಸ್ಯದಿಂದ ಯಾವ ಕೆಲಸ ಮಾಡೋದಕ್ಕೂ ಮನಸಾಗೋದಿಲ್ಲ. ಏನನ್ನೋ ಕಳೆದುಕೊಂಡ ಅನುಭವವಾಗ್ತಿರುತ್ತೆ. ಇದು ನಮ್ಮೆಲ್ರಿಗೂ ಸಾಕಷ್ಟು ಬಾರಿ ಆಗಿರುತ್ತೆ. ಇನ್ನು ಅದೆಷ್ಟೋ ಜನ ತಿಂಗಳುಗಳ ಗಟ್ಟಲೆ ಸರಿಯಾದ ನಿದ್ರೆಯಿಲ್ಲದೆ ನಾನಾ ಆರೋಗ್ಯ ಸಮಸ್ಯೆ ಎದುರಿಸ್ತಿರ್ತಾರೆ. ಅಂತಹವಿಗಾಗಿ ಅಂತಾನೇ ಒಂದು ವಂಡರ್ಫುಲ್ ಟಿಪ್ಸ್ ಇಲ್ಲಿದೆ. ಬರೀ ಎರಡೇ ನಿಮಿಷದಲ್ಲಿ ನಿದ್ರೆ ಮಾಡೋದ್ ಹೇಗೆ ಅನ್ನೋದನ್ನ ತಿಳಿಸ್ತೀವಿ.

ನಮಗೆ ಅನ್ನ-ನೀರು ಎಷ್ಟು ಮುಖ್ಯಾನೋ ನಿದ್ರೆ ಕೂಡ ಅಷ್ಟೇ ಮುಖ್ಯ.ಸಾಮಾನ್ಯವಾಗಿ ದಿನಕ್ಕೆ 8 ಗಂಟೆಗಳ ಕಾಲ ನಿದ್ರೆ ಮಾಡೋದು ಅತ್ಯವಶ್ಯಕ. ಸಮರ್ಪಕ ನಿದ್ರೆಯ ಕೊರತೆ ಇದ್ರೆ ಮುಗೀತು ಕಥೆ.. ತಲೆ ನೋವು,ಮೈಕೈ ನೋವು, ಕಿರಿಕಿರಿ ಅಲ್ಲದೆ, ಸ್ಕಿನ್ ಪ್ರಾಬ್ಲಮ್ ಕೂಡ ಉಂಟಾಗುತ್ತೆ.  ಕೆಲವ್ರಿಗೆ ಸಿಕ್ಕಾಪಟ್ಟೆ ಟೆನ್ಶನ್ ನಿಂದ ನಿದ್ರೆ ಬರೋದಿಲ್ಲ. ಹಾಗೆಯೇ ಡಿಪ್ರೆಷನ್ ನಲ್ಲಿರೋರಿಗಂತೂ ನಿದ್ರೆನೇ ಔಷಧ ಅಂದ್ರೆ ತಪ್ಪಾಗೋದಿಲ್ಲ. ಇನ್ನು ಕೆಲವರಿಗೆ ನಿದ್ರೆ ಮಾಡೋದಕ್ಕೆ ಅದೆಷ್ಟೇ ಪ್ರಯತ್ನ ಪಟ್ರೂ ಒಂದೈದು ನಿಮಿಷ ಕೂಡ ನೆಮ್ಮದಿಯಿಂದ ನಿದ್ರಿಸೋಕೆ ಸಾಧ್ಯವಾಗೋದಿಲ್ಲ. ರಾತ್ರಿಯೆಲ್ಲಾ ನಿದ್ರೆ ಬಾರದೆ ಒದ್ದಾಡಿ ಕೊನೆಗೆ ಬೆಳಗಿನ ಜಾವ ನಿದ್ರೆ ಮಾಡೋರಿಗೇನೂ ಕಮ್ಮಿ ಇಲ್ಲ. ಇದು ನಾನಾ ಆರೋಗ್ಯ ಸಮಸ್ಯೆ ತಂದಿಟ್ಟು, ಕಡೆಗೆ ಮಾನಸಿಕ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರೋದು ಕಟ್ಟಿಟ್ಟ ಬುತ್ತಿ.

ಹೀಗಾಗಿ ನಿದ್ರಾಹೀನತೆಯನ್ನ ಕಡೆಗಣಿಸೋದು ತುಂಬಾ ಅಪಾಯಕಾರಿ. ಇನ್ನು ಪ್ರಾಕೃತಿಕವಾಗಿ ನಿದ್ರೆ ಬರದವರಿಗಾಗಿ ಚಿಕಿತ್ಸೆ ಅತ್ಯವಶ್ಯ. ನಗರದ ಪ್ರದೇಶಗಳಲ್ಲಿ ಹೆಚ್ಚಾಗಿ ಈ ನಿದ್ರಾಹೀನತೆ ಕಂಡುಬರ್ತಿದೆ. ಇಂತಹವರು ನಿದ್ರೆ ಗುಳಿಗೆಗಳನ್ನ ಸೇವಿಸೋ ಅಭ್ಯಾಸ ಮಾಡಿಕೊಂಡಿರ್ತಾರೆ. ಆದ್ರೆ ನಿದ್ರೆ ಗುಳಿಗೆಗಳ ದೀರ್ಘಕಾಲದ ಸೇವನೆ ದೇಹದ ಮೇಲೆ ಇನ್ನಷ್ಟು ಅಡ್ಡ ಪರಿಣಾಮ ಉಂಟಾಗುತ್ತೆ.

ನಮ್ಮ ಇವತ್ತಿನ ಸ್ಟೋರಿಯಲ್ಲಿ ನಿದ್ರಾಹೀನತೆಯಿಂದ ಬಳಲುತ್ತಿರೋರಿಗೆ ಭರ್ಜರಿ ಟಿಪ್ಸ್ ಕೊಡ್ತಿದ್ದೀವಿ. ಬರೀ ಎರಡೇ ನಿಮಿಷದಲ್ಲಿ ನಿದ್ರೆಗೆ ಜಾರೋದು ಹೇಗೆ ಅನ್ನೋ ಬಗ್ಗೆ ನಿಮ್ಗೆ ತಿಳಿಸಿಕೊಡ್ತೀವಿ.

ಯೆಸ್, ಇವತ್ತು ನಾವು ನಿಮಗೆ 4-7-8 ಬ್ರೀಥಿಂಗ್ ಟೆಕ್ನಿಕ್ ಕುರಿತು ತಿಳಿಸಿಕೊಡ್ತೀವಿ.  

ಮೊದಲಿಗೆ ನೀವು ಮಲಗೋ ಜಾಗದಲ್ಲಿ ಯಾವುದೇ ಒತ್ತಡವಿರದೆ ಆರಾಮವಾಗಿ ಅಂಗಾತ ಮಲಗಿಕೊಳ್ಳಬೇಕು. ಬಾಯಿಯನ್ನು ಮುಚ್ಚಿ 4 ಸೆಕೆಂಡ್ ಗಳ ಕಾಲ ಮೂಗಿನಿಂದ ದೀರ್ಘವಾಗಿ ಉಸಿರು ತೆಗೆದುಕೊಳ್ಳಬೇಕು. ಬಳಿಕ 7 ಸೆಕೆಂಟ್ ಗಳ ವರೆಗೂ ಉಸಿರನ್ನು ಹಿಡಿದಿಟ್ಟುಕೊಳ್ಳಬೇಕು. ನಂತರ 8 ಸೆಕೆಂಡ್ ವರೆಗೂ ಹಿಡಿದಿಟ್ಬುಕೊಂಡಿರೋ ಉಸಿರನ್ನು ಬಾಯಿಯಿಂದ ಹೊರಬಿಡಬೇಕು. ಈ ರೀತಿ ನೀವು ಮಲಗೋವಾಗ 4 ರಿಂದ 8 ಬಾರಿ ಮಾಡಿದ್ರೆ ಕೂಡಲೇ ಸುಲಭವಾಗಿ ನಿದ್ರಾಲೋಕಕ್ಕೆ ಜಾರಬಹುದಾಗಿದೆ.

- Advertisement -

Latest Posts

Don't Miss