ಸಿಂಗಾಪುರ: ನಿರೀಕ್ಷೆಯಂತೆ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಆಟಗಾರ್ತಿ ಪಿ.ವಿ.ಸಿಂಧು ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್‍ನಲ್ಲಿ ಪಿ.ವಿ.ಸಿಂಧು ಜಪಾನ್‍ನ ಸಾಯಿನಾ ಕಾವಾಕಾಮಿ ವಿರುದ್ಧ 32 ನಿಮಿಷಗಳ ಕಾಲ ಹೋರಾಡಿ 21-15, 21-7 ಅಂಕಗಳಿಂದ ಗೆದ್ದರು.
27 ವರ್ಷದ ಸಿಂಧು ಈ ವರ್ಷ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಕಂಚು ಗೆದ್ದಿದ್ದರು. ಇದೀಗ ಮೊದಲ ಬಾರಿಗೆ ಸೂಪರ್ 500 ಪದಕ ಪದಕ ಗೆಲ್ಲಲು ಇನ್ನೊಂದು ಹೆಜ್ಜೆ ಬಾಕಿ ಇದೆ.
ಹೈದ್ರಾಬಾದ್ ಆಟಗಾರ್ತಿ ಸಿಂಧು ಇಂದು ಫೈನಲ್‍ನಲ್ಲಿ ಚೀನಾದ ವಾಂಗ್ ಜ್ಹಿ ಯೀ ವಿರುದ್ಧ ಸೆಣಸಲಿದ್ದಾರೆ. ವಾಂಗ್ ಜಪಾನ್‍ನ ಒಹೊರಿ ಆಯಾ ವಿರುದ್ಧ 21-14, 21-14 ಅಂಕಗಳಿಂದ ಗೆದ್ದರು .
ಫೈನಲ್‍ನಲ್ಲಿ ವಾಂಗ್ ವಿರುದ್ಧ ಸೆಣಸಲಿರುವ ಸಿಂಧು ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದಾರೆ. ಈ ವರ್ಷ ನಡೆದ ಆಲ್ ಇಂಗ್ಲೆಂಡ್ ಚಾಂಪಿಯನ್‍ಶಿಪ್‍ನಲ್ಲಿ ಸಿಂಧು ಅವರನ್ನು ಸೋಲಿಸಿದ್ದರು.

