- Advertisement -
ಸಿಂಗಾಪುರ:ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಸಿಂಗಾಪುರ ಓಪನ್ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಈ ಋತುವಿನಲ್ಲಿ ಮೂರನೆ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಪಿ.ವಿ.ಸಿಂಧು ಚೀನಾದ ವಾಂಗ್ ವಿರುದ್ಧ 21-9, 11-21, 21-15 ಅಂಕಗಳಿಂದ ಗೆದ್ದ ಟ್ರೋಫಿ ಗೆದ್ದುಕೊಂಡರು.
ಅಂತಮ ಕದನದ ಕಠಿಣ ಸಂದರ್ಭದಲ್ಲಿ ಸಿಂಧು ಎಚ್ಚರಿಕೆಯ ಆಟವಾಡಿದರು. ಮೊದಲ ಸೆಟ್ ಅನ್ನು 21-9 ಅಂತರದಿಂದ ಗೆದ್ದರು.
ಎರಡನೆ ಸೆಟ್ ನಲ್ಲಿ ಹಲವಾರು ತಪ್ಪುಗಳನ್ನು ಮಾಡಿ 11-21 ಅಂಕಗಳಿಂದ ಸೋತರು. ನಿರ್ಣಾಯಕ ಮೂರನೆ ಸೆಟ್ ನಲ್ಲಿ ಎಚ್ಚೆತ್ತ ಹೈದ್ರಾಬಾದ್ ಆಟಗಾರ್ತಿ ತಪ್ಪುಗಳನ್ನು ಕಡಿಮೆ ಮಾಡಿ ವಿಜಯಿಯಾದರು.
ಈ ವರ್ಷ ನಡೆದ ಆಲ್ ಇಂಗ್ಲೆಂಡ್ ಓಪನ್ ಟೂರ್ನಿಯಲ್ಲೂ ಸಿಂಧು ವಾಂಗ್ ಅವರನ್ನು ಸೋಲಿಸಿದ್ದರು.
- Advertisement -