Sandalwood News: ಸರಿಗಮಪ ರಿಯಾಲಿಟಿ ಶೋ ಮೂಲಕ ಪ್ರಸಿದ್ಧರಾದ ಹಲವು ಗಾಯಕರಲ್ಲಿ ಅಖಿಲಾ ಪಜಿಮಣ್ಣು ಕೂಡ ಒಬ್ಬರು. ನೋಡಲು ಸುಂದರವಾಗಿದ್ದು, ಉತ್ತಮ ನಿರೂಪಣಾ ಶೈಲಿ ಇದ್ದ ಕಾರಣ, ಇವರಿಗೆ ಕೆಲ ಕಾರ್ಯಕ್ರಮದಲ್ಲಿ ನಿರೂಪಣೆಯ ಅವಕಾಶವೂ ಸಿಕ್ಕಿತ್ತು. ಹೀಗೆ ಆಲ್ರೌಂಡರ್ ಎನ್ನಿಸಿಕ“ಂಡಿದ್ದ ಗಾಯಕಿಯ ಬಾಳಲ್ಲೀಗ ಬಿರುಗಾಳಿ ಬೀಸಿದೆ. ಅಖಿಲಾ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ಇಚ್ಛಿಸಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಅಖಿಲಾ ಅಮೆರಿಕದಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದ ಧನಂಜಯ್ ಶರ್ಮಾ ಎಂಬುವವರನ್ನು 2022ರಲ್ಲಿ ಮದುವೆಯಾಗಿದ್ದ. ಮನೆಯವರೇ ನೋಡಿದ್ದ ವರನ ಜತೆ ಅಖಿಲಾ ಸಪ್ತಪದಿ ತುಳಿದಿದ್ದರು. 4 ವರ್ಷ ಅಚ್ಚುಕಟ್ಟಾಗಿ ಸಂಸಾರ ಮಾಡಿದ್ದ ಅಖಿಲಾ, ಧನಂಜಯ್ ಜತೆ ಅಮೆರಿಕ್ಕಕೂ ಹೋಗಿದ್ದರು. ಅಲ್ಲಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದ ಕಾರಣಕ್ಕೆ, ಅಖಿಲಾ ಅವರ ಪ್ರಸಿದ್ಧಿಗೇನೂ ಕೊರತೆಯಾಗಿರಲಿಲ್ಲ.
ಆದರೆ ಇದೀಗ 6 ತಿಂಗಳಿನಿಂದ ಅಖಿಲಾ ಮತ್ತು ಧನಂಜಯ್ ಸಂಸಾರದಲ್ಲಿ ಬಿರುಕಾಗಿದ್ದು, ಇಬ್ಬರೂ ಮ್ಯೂಚುವಲ್ ಆಗಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಕೋರ್ಟ್ ಅವರಿಗೆ 6 ತಿಂಗಳು ಸಮಸ್ಯೆ ಸರಿ ಮಾಡಿಕ“ಳ್ಳಲು ಅವಕಾಶ ನೀಡಿದ್ದರೂ ಕೂಡ, ದೂರಾಗುವ ನಿರ್ಧಾರ ಮಾಡಿದ್ದು, ಅಖಿಲಾ ಅಭಿಮಾನಿಗಳಿಗೆ ಇದು ಬೇಸರದ ವಿಚಾರವೇ ಆಗಿದೆ.