Sirsi News: ಶಿರಸಿ: ಶಿರಸಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೈಡ್ರಾಮಾ ನಡೆದಿದೆ. ಶಿವರಾಮ್ ಹೆಬ್ಬಾರ್ ಬಳಿ ಎಪಿಎಂಸಿ ಮಾಜಿ ಅಧ್ಯಕ್ಷ ಸುನೀಲ ನಾಯ್ಕ್ ಹಲವು ವಿಷಯಗಳ ಬಗ್ಗೆ ಪ್ರಶ್ನೆ ಕೇಳಿದ್ದು, ಎಲ್ಲ ಪ್ರಶ್ನೆಗಳಿಗೂ ಸ್ಪಷ್ಟನೆ ನೀಡಿ ಎಂದು ಕೇಳಿದ್ದಾರೆ.
ಶಿರಸಿ-ಹಾವೇರಿ ಹೈವೇ ಕಾಮಗಾರಿ ಸ್ಥಗಿತಗೊಂಡಿದೆ.. ನಮ್ಮ ಗೋಳು ಕೇಳೋರಿಲ್ಲ. 13 ವರ್ಷದ ಹಿಂದೆ ಬನವಾಸಿ ಗ್ರಿಡ್ ಗೆ ಭೂಮಿ ಪೂಜೆ.. ಉದ್ಘಾಟನೆಗೊಂಡು 4 ವರ್ಷವಾಗಿದೆ. ಆದರೆ ಇನ್ನೂ ಕರೆಂಟ್ ಇಲ್ಲ.. ಆದರೆ ರೈತರ ಪಾಡು ಯಾರೂ ಕೇಳೋರೇ ಇಲ್ಲ ಎಂದು ಸುನೀಲ್ ನಾಯ್ಕ್ ಕೆಂಡಾಮಂಡಲರಾಗಿದ್ದಾರೆ.
ಬದುಕಿಗಾಗಿ ಹೋರಾಟ ಮಾಡುವ ಸ್ಥಿತಿ.. ನೆಮ್ಮದಿಯಿಂದ ಬದುಕಲು ಬಿಡಿ. ಅನುಷ್ಠಾನಗೊಂಡ ಏತ ನೀರಾವರಿಯಿಂದ ಒಂದು ಹನಿ ಕೂಡಾ ನೀರು ಬಂದಿಲ್ಲ. ನಮ್ಮ ನಾಯಕರು ನೀವು.. ಉತ್ತರ ಕೊಡಿ ಸಾರ್.. ಎಂದು ಹೆಬ್ಬಾರ್ ಗೆ ತರಾಟೆ ತೆಗೆದುಕ“ಂಡಿದ್ದಾರೆ.
NHAI ಅಧಿಕಾರಿಗಳೇ ಇಲ್ಲ.. ಇದು ಯಾವ ರೀತಿ ಪ್ರಗತಿ ಪರಿಶೀಲನಾ ಸಭೆ!? ಪ್ರಗತಿ ಪರಿಶೀಲನಾ ಸಭೆಯ ಅರ್ಥ ಗೊತ್ತಿದ್ಯಾ? ಎಂದು ಸುನೀಲ್ ನಾಯ್ಕ ಖಾರವಾಗಿಯೇ ಪ್ರಶ್ನಿಸಿದ್ದಾರೆ. ಈ ವೇಳೆ ಪ್ರಶ್ನೆಗೆ ಉತ್ತರಿಸಲಾಗದೇ ಶಾಸಕ ಶಿವರಾಮ್ ಹೆಬ್ಬಾರ್, NHAI ನಮ್ಮ ಅಧೀನದಲ್ಲಿ ಬರುವುದಿಲ್ಲ.. ಸಂಸದರನ್ನು ಪ್ರಶ್ನಿಸಿ ಎಂದು ಕೈತೊಳೆದುಕೊಂಡಿದ್ದಾರೆ. ಶಾಸಕರಿಂದ ಸಮರ್ಪಕ ಉತ್ತರ ಸಿಗದ ಕಾರಣ ಸುನೀಲ ನಾಯ್ಕ ಸಭೆಯಿಂದ ಹೊರ ನಡೆದಿದ್ದಾರೆ.




