Hassan News: ಹಾಸನ : ಎಸ್‌ಐಟಿ ತಂಡ ಭರ್ಜರಿಯಾಗಿ ಪ್ರಜ್ವಲ್ ರೇವಣ್ಣ ಅವರ ವಿಚಾರಣೆ ನಡೆಸಿದ್ದು, ಇಂದು ಹಾಸನದಲ್ಲಿರುವ ಚೆನ್ನಾಂಬಿಕಾ ನಿವಾಸಕ್ಕೆ ಕರೆ ತಂದಿದ್ದರು.
ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮಾಧ್ಯಮದವರ ಕಣ್ತಪ್ಪಿಸಿ ಹೋಗಲು, ಎಸ್‌ಐಟಿ ತಂಡ ಕ್ಯೂಆರ್‌ಟಿ ವಾಹನ ಬಳಸಿತ್ತು. ವಾಹನ ಫುಲ್ ಕವರ್ ಆಗಿದ್ದು, ಪ್ರಜ್ವಲ್ ರೇವಣ್ಣ ಅವರು ಕಾಣದಂತೆ ಕುಳಿತಿದ್ದರು.
ಹಾಸನದ ಹೊಳೆನರಸಿಪುರದಲ್ಲಿರುವ ಪ್ರಜ್ವಲ್ ರೇವಣ್ಣ ನಿವಾಸಕ್ಕೆ ಆಗಮಿಸಿ, ಡಿವೈಎಸ್ಪಿ ಸತ್‌ಯನಾರಾಯಣ್ ಟೀಂ ಸ್ಥಳ ಮಹಜರಿನ ಜೊತೆಗೆ, ಸಾಕ್ಷಿ ಕೂಡ ಕಲೆ ಹಾಕಿತು.
ವಿಚಾರಣೆ ಎಲ್ಲ ಮುಗಿಸಿ, ಎಸ್‌ಐಟಿ ಹೊರಡುವಾಗ, ಪ್ರಜ್ವಲ್ ನಿವಾಸದ ಬಳಿ ಬಂದಿದ್ದ ಜೆಡಿಎಸ್ ಕಾರ್ಯಕರ್ತರು, ಪ್ರಜ್ವಲ್ ರೇವಣ್ಣ ಪರ ಘೋಷಣೆ ಕೂಗಿದ್ದಾರೆ.
ಎಸ್‌ಐಟಿ ಅಧಿಕಾರಿಗಳು ನಾಲ್ಕು ಗಂಟೆಗೂ ಕಾಲ ವಿಚಾರಣೆ ನಡೆಸಿದ್ದು, ಬಳಿಕ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.




