Sunday, September 8, 2024

Latest Posts

ಮಾರ್ನಿಂಗ್ ಬ್ರೇಕ್ ಫಾಸ್ಟ್ ಸ್ಕಿಪ್ ಮಾಡಿ, ಏನಾಗತ್ತೆ ನೋಡಿ?

- Advertisement -

ಆರೋಗ್ಯವಾಗಿರಲು ಸರಿಯಾದ ಆಹಾರ ಸೇವನೆ ಅತೀ ಮುಖ್ಯ. ದಿನದಲ್ಲಿ ಮೂರು ಹೊತ್ತಿನ ಆಹಾರಾಭ್ಯಾಸ ರೂಢಿಗೊಳಿಸಿಕೊಂಡರೆ ದೇಹದ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸಬಹುದು. ಇಲ್ಲವಾದಲ್ಲಿ ಅನೇಕ ರೀತಿಯ ಅರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಈಗಿನ ಜೆನರೇಷನ್ ನವರು ರಾತ್ರಿ ಲೇಟಾಗಿ ಮಲಗಿ ಬೆಳಗ್ಗೆ ತಡವಾಗಿ ಏಳುವುದನ್ನ ಅಭ್ಯಾಸ ಮಾಡಿಕೊಂಡಿರುತ್ತಾರೆ. ಸರಿಯಾದ ಆಹಾರ ಸೇವನೆ ಎಷ್ಟು ಮುಖ್ಯವೋ, ಹಾಗೆಯೇ ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದೂ ಅಷ್ಟೇ ಮುಖ್ಯ. ಬೆಳಗ್ಗೆ ರಾಜನಂತೆ ತಿಂದು, ಮಧ್ಯಾಹ್ನ ಮಂತ್ರಿಯಂತೆ ತಿನ್ನಬೇಕು, ರಾತ್ರಿ ಮಾತ್ರ ಸೈನಿಕನಂತೆ ಸ್ವಲ್ಪ ಆಹಾರವನ್ನು ತಿನ್ನಬೇಕು ಎಂಬ ಮಾತಿದೆ. ಇದರ ಅರ್ಥದಂತೆ ಯಾವಾಗಲೂ ಬೆಳಗ್ಗಿನ ಆಹಾರ ಸೇವನೆ ಅತೀ ಮುಖ್ಯ.

ಬೆಳಗ್ಗಿನ ಆಹಾರಕ್ಕೆ ಯಾವಾಗಲೂ ಕ್ಯಾಲ್ಸಿಯಂ,  ಪ್ರೋಟೀನ್‌ ಮತ್ತು ಫೈಬರ್‌ ಪದಾರ್ಥಗಳನ್ನು ತಿನ್ನುವುದು ಉತ್ತಮ. ಹಾಗೂ ಸೋಂಕಿನ ಅಪಾಯದ ವಿರುದ್ಧ ಹೋರಾಡಲು ನಿಯಮಿತ ಆಹಾರ ಅಗತ್ಯವಾದದ್ದು, ಬೆಳಗಿನ ತಿಂಡಿಯನ್ನು ತ್ಯಜಿಸಿದರೆ ಜೀವಕೋಶಗಳಿಗೆ ಹಾನಿಯಾಗುತ್ತದೆ. ಅಷ್ಟೇ ಅಲ್ಲದೆ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆಯಲ್ಲೇ ಉಳಿಯುವಂತಾಗಿ ದೇಹದಲ್ಲಿ ಅನಗತ್ಯ ಕೊಬ್ಬಿನ ಶೇಖರಣೆಯಾಗಿ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಹಾಗೂ ನಿಶಕ್ತಿಗೂ ಕಾರಣವಾಗುತ್ತದೆ.

ಬೆಳಗ್ಗಿನ ಆಹಾರ ಸೇವನೆ ಮಾಡದೆ ಇದ್ದರೆ ಪ್ರೋಟೀನ್‌ ಅಂಶಗಳು ಸರಿಯಾದ ಪ್ರಮಾಣದಲ್ಲಿ ದೊರಕದೆ ಉಗುರು ಆಗಾಗ ತುಂಡಾಗುವುದು, ಕೂದಲು ಉದುರಿವಿಕೆ,  ಹೀಗೆ ಹಲವು ಬಗೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಬೆಳಗ್ಗಿನ ಬ್ರೇಕ್ ಫಾಸ್ಟ್ ಗೆ ಹಣ್ಣು, ತರಕಾರಿ, ಓಟ್ಸ್‌ನಂತಹ ಆಹಾರಗಳ ಸೇವನೆ ಮತ್ತು ಕಬ್ಬಿಣಾಂಶ, ಫೈಬರ್‌ ಅಂಶಗಳಿರುವ ಆಹಾರ ಸೇವನೆ ಉತ್ತಮ.

ಇದಷ್ಟೇ ಅಲ್ಲದೆ ಬೆಳಗ್ಗಿನ ತಿಂಡಿಯನ್ನ ಸ್ಕಿಪ್ ಮಾಡಿದರೆ ಗ್ಯಾಸ್ಟ್ರಿಕ್‌, ಆಸಿಡಿಟಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಬೆಳಗಿನ ತಿಂಡಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಉತ್ತಮ. ಬ್ರೇಕ್ ಫಾಸ್ಟ್ ಸ್ಕಿಪ್ ಮಾಡುವುದರಿಂದ ಒಂದಲ್ಲ ಎರಡಲ್ಲ, ಹಲವು ಸಮಸ್ಯೆ ಎದುರಾಗುತ್ತದೆ. ರಕ್ತದಲ್ಲಿ ಇರುವ ಸಕ್ಕರೆ ಪ್ರಮಾಣ ಕಡಿಮೆಯಾಗಿ ರಕ್ತದೊತ್ತಡ ಹೆಚ್ಚಾಗಿ ತೀವ್ರವಾದ ತಲೆನೋವು ಕಾಣಿಸಿಕೊಳ್ಳುತ್ತದೆ. ಇಡೀ ದಿನದ ವರ್ಕ್ ಪ್ರೆಷರ್ ಅನ್ನು ನಿರ್ವಹಿಸಲು ಬೆಳಗ್ಗಿನ ತಿಂಡಿ ಶಕ್ತಿ ನೀಡುತ್ತದೆ. ಹಾಗಾಗಿ ಬ್ರೇಕ್ ಫಾಸ್ಟ್ ಆರೋಗ್ಯಕ್ಕೆ ಅತೀ ಮಖ್ಯವಾಗಿದೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

- Advertisement -

Latest Posts

Don't Miss