Sunday, December 22, 2024

Latest Posts

ಅಂಡರ್ 19 ನಲ್ಲಿ ಪ್ರವೇಶ ಪಡೆದ ಹುಬ್ಬಳ್ಳಿ ಹುಡುಗ..!

- Advertisement -

www.karnatakatv.net :ಹುಬ್ಬಳ್ಳಿ: ಅಂಡರ್ 19 ರಾಜ್ಯ ತಂಡಕ್ಕೆ ಹುಬ್ಬಳ್ಳಿಯ ಯುವಕನೊಬ್ಬ ಆಯ್ಕೆಯಾಗುವ ಮೂಲಕ ವಾಣಿಜ್ಯ ನಗರಿ‌ ಕೀರ್ತಿ ಹೆಚ್ಚಿಸಿದ್ದಾನೆ.

ಹೌದು. ಹುಬ್ಬಳ್ಳಿಯ ಯುವರಾಜ ಸಿಂಗ್ ಎಂದು  ಕರೆಯಲ್ಪಡುವ ನಗರದ ಜೆ.ಜಿ. ಕಾಮರ್ಸ ಕಾಲೇಜ್‌ಲ್ಲಿ ದ್ವಿತೀಯ ಪಿ.ಯು.ಸಿ. ಓದುತ್ತಿರುವ ಎಡಗೈ ಸ್ಪಿನ್ನಿಗ್ ಜೊತೆಗೆ ಮಧ್ಯಮ ಕ್ರಮಾಂಕದ ಹೊಡೆಬಡಿಯ ಆಟಗಾರ ರಾಜೇಂದ್ರ ಡಂಗನವರ ಪ್ರತಿಷ್ಠಿತ ವಿನೂ ಮಂಕಡ್ ಟ್ರೋಫಿಯಲ್ಲಿ ಪ್ರತಿನಿಧಿಸಲಿರುವ 19 ವರ್ಷದೊಳಗಿನ ರಾಜ್ಯ ತಂಡಕ್ಕೆ ಬಲಗಾಲಿಟ್ಟಿದ್ದಾನೆ.

ಇದೇ  28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಆಡಲು ಧಾರವಾಡ ವಲಯದಿಂದ ಅರ್ಹತೆ ಪಡೆದ ರಾಜೇಂದ್ರ ಬಿಸಿಸಿಐ ಸಿ ಲೆವಲ್ ಹಾಗೂ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೋಮಶೇಖರ ಶಿರಗುಪ್ಪಿ ಬಳಿ ತರಬೇತಿ ಪಡೆದಿದ್ದಾರೆ.

6ನೇ ವಯಸ್ಸಿಗೆ ಬ್ಯಾಟ್ ಹಿಡಿಯಲಾರಂಭಿಸಿದ ರಾಜೇಂದ್ರ ಸಿಸಿಕೆ ಧಾರವಾಡ ಪರ ಮೊದಲ ಡಿವಿಷನ್, ಬೆಂಗಳೂರಿನ ಫ್ರೆಂಡ್ಸ ಕ್ರಿಕೆಟ್ ಯೂನಿಯನ್ ಪರ ಸಹ ಆಟವಾಡಿದ್ದು, 14 ಮತ್ತು 16ರೊಳಗಿನ ತಂಡದಲ್ಲೂ ತನ್ನ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಸದ್ದು ಮಾಡಿದ್ದು, ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದಾನೆ.

ಅನೀಶ್ವರ ಗೌತಮ್ ನಾಯಕನಾಗಿರುವ 19ರೊಳಗಿನ ತಂಡದಲ್ಲಿ ಸ್ಥಾನ ಪಡೆದಿರುವ ರಾಜೇಂದ್ರ ಸಾಮಾಜಿಕ ಕಾರ್ಯಕರ್ತ, ಸೆಂಟ್ರಲ್ ಬಿಜೆಪಿ ಮುಖಂಡ ಶಶಿಶೇಖರ ಡಂಗನವರ ಹಾಗೂ ಗೌರಿ ದಂಪತಿಗಳ ಪುತ್ರನಾಗಿದ್ದು, ಮಗ ಉತ್ತಮ ಸಾಧನೆ ಮಾಡುವ ವಿಶ್ವಾಸ ಹೊಂದಿದ್ದಾರೆ. ಓದಿನಲ್ಲೂ ಮುಂದಿರುವ ಈತ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.84ರಷ್ಟು ಅಂಕ ಗಳಿಸಿದ್ದಾನೆ.

ಹಲವು ವರ್ಷಗಳ ನಂತರ ವಾಣಿಜ್ಯ ನಗರಿಯ ಯುವಕ  ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದು, ಈಗಾಗಲೇ ಇಂದೋರ್ ತಲುಪಿರುವ ರಾಜೇಂದ್ರ ಉತ್ತಮ ಪ್ರದರ್ಶನ ನೀಡಲು ಎಂಬುದು‌ ಕ್ರೀಡಾಭಿಮಾನಿಗಳ ಆಶಯವಾಗಿದೆ.

ಕರ್ನಾಟಕ ಟಿವಿ – ಹುಬ್ಬಳ್ಳಿ

- Advertisement -

Latest Posts

Don't Miss