www.karnatakatv.net :ತುಮಕೂರು: ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದಂತಹ ಆಸ್ಪತ್ರೆ ಸಿಬ್ಬಂದಿಗಳಿಗೆ, ಆರಕ್ಷಕರಿಗೆ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ನಿಟ್ಟೂರು ರೋಟರಿ ಕ್ಲಬ್ ವತಿಯಿಂದ ತಂಪಾದ ಪಾನೀಯಗಳನ್ನು ವಿತರಣೆ ಮಾಡಲಾಯಿತು.
ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ವಿಶ್ವವೇ ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್ ಗಳಾಗಿ ಅನೇಕರು ದುಡಿದಿದ್ದರು. ಅಂತಹ ಕೊರೊನಾ ವಾರಿಯರ್ಸ್ ಗಳನ್ನ ಗುರುತಿಸಿ ಅವರನ್ನ ಗೌರವಿಸುವ ಕೆಲಸಗಳು ನಡೆಯುತ್ತಿವೆ. ಅದರಂತೆ ಆಸ್ಪತ್ರೆ ಸಿಬ್ಬಂದಿಗಳಿಗೆ, ಆರಕ್ಷಕರಿಗೆ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ನಿಟ್ಟೂರು ರೋಟರಿ ಕ್ಲಬ್ ವತಿಯಿಂದ ತಂಪಾದ ಪಾನೀಯಗಳನ್ನು ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಯತೀಶ್ ಕರೋನಾ ದಂತಹ ಸಂದರ್ಭದಲ್ಲಿ ಎಲ್ಲರೂ ಸಹ ಬೆಚ್ಚಗೆ ಮನೆಯೊಳಗೆ ಬದುಕುಳಿದರೆ ಸಾಕು ಎಂದು ಕುಳಿತಿದ್ದರೆ ಕರೋನಾ ವಾರಿಯರಸ್ಸ್ ಗಳಾಗಿ ಸೇವೆ ಸಲ್ಲಿಸಿದಂತಹ ಆಸ್ಪತ್ರೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿಗಳಿಗೆ ನಾವು ಎಷ್ಟೇ ಧನ್ಯವಾದ ಹೇಳಿದರು ಕಡಿಮೆ. ಕರೋನಾ ವಾರಿಯರ್ಸ್ ಕಡೆಗೆ ವಿಶೇಷ ಶಕ್ತಿ ಕೊಡುವ ತಂಪು ಪಾನೀಯಗಳನ್ನು ವಿತರಣೆ ಮಾಡುತ್ತಿರುವುದು ಬಹಳ ಸಂತೋಷ ಎಂದು ತಿಳಿಸಿದರು
ಚೇಳೂರು ಸಬ್ಇನ್ಸ್ಪೆಕ್ಟರ್ ವಿಜಯಕುಮಾರಿ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತರು ಕರೋನಾ ಇದ್ದಂತಹ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಸ್ಯಾಂಪಲ್ಸ್ ಗಳನ್ನು ಒಟ್ಟುಗೂಡಿಸಿ ಅವರಿಗೆ ಚಿಕಿತ್ಸೆ ಹಾಗೂ ಮಾತ್ರೆಗಳನ್ನು ನೀಡುತ್ತಿದ್ದದ್ದು ನೋಡಿದಾಗ ರ ಬಗ್ಗೆ ಸಾಕಷ್ಟು ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು
ಒಟ್ನಲ್ಲಿ ವಾರಿಯರ್ಸ್ ಸೇವೆ ಅವಿಸ್ಮರಣೀಯ, ಅವರ ಕರ್ತವ್ಯ ಪರಿಪಾಲನೆಯನ್ನ ಮೆಚ್ಚಲೇಬೇಕು. ಸರ್ಕಾರ ಕೊರೊನಾ ವಾರಿಯರ್ಸ್ ಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಕೆಲಸ ಮಾಡಲಿ ಎಂಬುದು ನಮ್ಮ ಆಶಯ ಕೂಡ
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು