ನವದೆಹಲಿ : ಕೇಂದ್ರದಲ್ಲಿ ಕಳೆದ ಅವಧಿಯ ಮೋದಿ ಸರ್ಕಾರದಲ್ಲಿ ಸ್ಮೃತಿ ಇರಾನಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಸಚಿವೆಯಾಗಿದ್ದರು. ಬಿಜೆಪಿಯ ಮಹಿಳಾ ನಾಯಕಿಯರಲ್ಲಿ ಇರಾನಿ ತಮ್ಮ ಮಾತಿನ ಶೈಲಿಯ ಮೂಲಕ ದೇಶದ ಗಮನ ಸೆಳೆದಿದ್ದರು. ಅಲ್ಲದೆ ವಿಪಕ್ಷಗಳಿಗೂ ಸರಿಯಾದ ರೀತಿಯಲ್ಲಿ ತಿರುಗೇಟು ನೀಡುವ ಮೂಲಕ ಕೇಂದ್ರ ಸರ್ಕಾರದ ಸಮರ್ಥನೆಗಿಳಿಯುತ್ತಿದ್ದರು.
ಆದರೆ ಇದೀಗ ಇರಾನಿ ಸಂದರ್ಶನವೊಂದರಲ್ಲಿ ತಮ್ಮ ರಾಜಕೀಯ ಜೀವನ ಹಾಗೂ ಅಮೇಥಿ ಕ್ಷೇತ್ರದಲ್ಲಿ ಸೋಲಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಲ್ಲದೆ ಮುಖ್ಯವಾಗಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.
ಆರಂಭದಲ್ಲಿ ಅಮೇಥಿ ಲೋಕಸಭಾ ಕ್ಷೇತ್ರವು ಹಲವು ದಿಗ್ಗಜ ನಾಯಕರು ಸ್ಪರ್ಧಿಸಿರುವ ಐತಿಹಾಸಿಕ ಕ್ಷೇತ್ರವಾಗಿದೆ. ಇಲ್ಲಿಂದಲೇ ಮನೇಕಾ ಗಾಂಧಿ ಹಾಗೂ ಶರದ್ ಪವಾರ್ ಅವರಂತಹ ಘಟಾನುಘಟಿಗಳು ಕಣಕ್ಕಿಳಿದಿದ್ದು ಇಲ್ಲೆ ಎಂದು ಹೇಳಿದ್ದಾರೆ. ಅಲ್ಲದೆ ಗಾಂಧಿ ಕುಟುಂಬ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಇಲ್ಲಿನ ಸಾಮಾಜಿಕ ಗಣಿತವನ್ನು ಮಾಡಿದೆ. ಬಳಿಕ ಇದರತ್ತ ಒಲವು ಮೂಡಿಸಿತ್ತು. ಇಂದಿನ ರಾಜಕೀಯದಲ್ಲಿ ಅಷ್ಟು ಸುಲಭವಾಗಿ ಯಾರೂ ತಮ್ಮ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವದಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಏನಾದರೂ ಒಂದು ವೇಳೆ ಇಂತಹ ದೊಡ್ಡ ಕ್ಷೇತ್ರದ ಬಿ ಫಾರಂ ನೀಡಿದರೆ ಯಾವುದೇ ನಾಯಕರು ನಿರಾಕರಣೆ ಮಾಡಲ್ಲ. ಆದರೆ ಅಮೇಥಿಯ ಸಂಸದೆಯಾಗಿದ್ದಾಗ, ಕ್ಷೇತ್ರಲ್ಲಿನ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಬೀದಿ ಬೀದಿಗಳಲ್ಲಿ ಹೋಗಿ ಚರಂಡಿಗಳನ್ನು ಶುಚಿಗೊಳಿಸಿದ್ದೇನೆ. ಈಗಾಗಲೇ ನನ್ನ ಕ್ಷೇತ್ರದಲ್ಲಿ 1 ಲಕ್ಷ ಮನೆಗಳು ಹಾಗೂ ಮೆಡಿಕಲ್ ಕಾಲೇಜನ್ನೂ ಆರಂಭಿಸಿದ್ದೇನೆ ಎಂದು ಇರಾನಿ ತಮ್ಮ ಕಾರ್ಯಗಳ ಮಾಹಿತಿ ನೀಡಿದ್ದಾರೆ.
ಆಗ ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಗಾಂಧಿ ಕುಟುಂಬ ನನ್ನ ವಿರುದ್ಧ ಕಣಕ್ಕಿಳಿಯಲು ಮುಂದಾಗಿರಲಿಲ್ಲ. ನನ್ನನ್ನು ಎದುರಿಸಲು ಹಿಂದೇಟು ಹಾಕಿತ್ತು. ಅದು ಬಿಡಿ ಆ ಕುಟುಂಬ ನನ್ನ ವಿರುದ್ಧ ರಣಾಂಗಣಕ್ಕೆ ಇಳಿಯಲಿಲ್ಲ. ಈಗ ರಾಹುಲ್ ಗಾಂಧಿ ಅತ್ಯಂತ ಆಕ್ರೋಶಿತರಾಗಿ, ಆಕ್ರಮಣಕಾರಿ ವರ್ತನೆ ಮಾಡುವುದು ಬೇಡ, ಅದರ ಅಗತ್ಯವೂ ಇಲ್ಲ ಎಂದು ಇರಾನಿ ಕಿಡಿಕಾರಿದ್ದಾರೆ. ನನ್ನ ವಿರುದ್ಧ ಸ್ಪರ್ಧಿಸಲು ಇಚ್ಚೆ ಮಾಡದ ರಾಹುಲ್ ಗಾಂಧಿಯ ಹಿಂದೆಯೇ ನಾನು ಓಡಲಾರೆ. ಅಂದರೆ, ಅವರು ಸ್ಪರ್ಧೆ ಮಾಡಿದಲೆಲ್ಲ ನಾನು ಕಣಕ್ಕಿಳಿಯಲಾರೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
ಕೆಲಸ ಹಾಗೂ ರಾಜಕೀಯವನ್ನು ತಾಳೆ ಹಾಕುವಲ್ಲಿ ಬಹಳ ವ್ಯತ್ಯಾಸ ಇರುತ್ತದೆ. ರಾಜಕೀಯದಲ್ಲಿದ್ದವರು ಈ ಎರಡರ ನಡುವಿನ ಏರು-ಪೇರುಗಳನ್ನು ಸರಳವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ರಾಜಕೀಯ ಮತ್ತು ರಾಷ್ಟ್ರನೀತಿಗೂ ಯಾವುದೇ ಸಂಬಂಧ ಇಲ್ಲ. ನಾನು ರಾಷ್ಟ್ರನೀತಿಯಲ್ಲಿ ಸಕ್ರಿಯವಾಗಿದ್ದೆ ಎಂದು ಸೋಲಿನ ವಿಚಾರಕ್ಕೆ ಇರಾನಿ ಹೀಗೆ ಉತ್ತರಿಸಿದ್ದಾರೆ.
ಅಲ್ಲದೆ ನಾನು ಅಮೇಥಿ ಕ್ಷೇತ್ರದಲ್ಲಿ ಸೋತರೂ ಅಲ್ಲಿಂದ ದೂರ ಹೋಗಿಲ್ಲ. ನನ್ನ ಜನರ ಜೊತೆ ಸಂಪರ್ಕದಲ್ಲಿದ್ದೇನೆ. 2014 ರಿಂದ 2019ರ ನಡುವಿನ ಅವಧಿಯಲ್ಲಿ ಅಮೇಥಿಯಲ್ಲಿ ನಾನು ಅನೇಕ ಅಡೆವಲಪ್‌ಮೆಂಟ್ ಕೆಲಸಗಳನ್ನು ಮಾಡಿದ್ದೇನೆ. ಕಳೆದ 2019ರ ಚುನಾವಣೆಯಲ್ಲಿ ಕ್ಷೇತ್ರದ ಜನರು ನನ್ನನ್ನು ಸಂಸದೆಯಾಗಿ ಸ್ವೀಕರಿಸಿದ್ದರು. ಆದರೆ ಜನರ ಕೆಲಸ ಮಾಡಲಿಲ್ಲವೆಂದರೆ ನನಗೆ ಬಹಳಷ್ಟು ನೋವು ಆಗುತ್ತದೆ. ನಾನು ಸೋತಿರಬಹುದು ಆದರೆ ನನ್ನ ಕೆಲಸಗಳ ಬಗ್ಗೆ ಕ್ಷೇತ್ರದ ಜನರು ಸ್ಮರಿಸುತ್ತಾರೆ ಎಂದು ಬಿಜೆಪಿ ನಾಯಕಿ ತಮ್ಮ ಕ್ಷೇತ್ರದ ಜನರ ಒಡನಾಟದ ಬಗ್ಗೆ ಹಂಚಿಕೊಂಡಿದ್ದಾರೆ.
ನಾನು ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದೆ. ಆ ಬಳಿಕ ನಾನು ಸಾಕಷ್ಟು ರಾಜಕೀಯ ಸವಾಲು, ಸಮಸ್ಯೆಗಳನ್ನು ಫೇಸ್ ಮಾಡಬೇಕಾಯಿತು. ನಾನು ನಡೆದು ಬಂದ ರಾಜಕೀಯದ ಹಾದಿ ಅಷ್ಟೊಂದು ಸರಳವಾಗಿರಲಿಲ್ಲ. ಇಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿದ್ದವರು ತಮ್ಮ ರಾಜಕಾರಣದ ಶೈಲಿ ಅಥವಾ ಮಾಧ್ಯಮಗಳ ಮೂಲಕ ಜನರ ಗಮನ ಸೆಳೆಯಬೇಕಾಗುತ್ತದೆ ಎಂದು ಸ್ಮೃತಿ ಇರಾನಿ ರಾಜಕೀಯ ಬದುಕಿನ ಘಟನೆಗಳನ್ನು ಮೆಲುಕು ಹಾಕಿದ್ದಾರೆ.