ರಾಜಕೀಯ ಸುದ್ದಿ: ಬೇಲಿನೆ ಎದ್ದು ಹೊಲ ಮೇಯ್ದಂತೆ ಆಗಿದೆ ಎನ್ನುವ ರೀತಿಯಲ್ಲಿದೆ ಇವರುಗಳ ಕೆಲಸ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವ ಬದಲು ಗಲಭೆ ಮಾಡಿದವರನ್ನುಬಿಡುಗಡೆಗೊಳಿಸುವಂತೆ ತನ್ವಿರ್ ಸೇಠ್ ಗೃಹ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇದೇ ವಿಚಾರವಾಗಿ ವಾಗ್ದಾಳಿ ಮಾಡಿರುವ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಉಗ್ರಗಾಮಿ ಸಂಘಟನೆಗಳ ಮುಖ್ಯಸ್ಥ ತನ್ವಿರ್ ಸೇಠ್ ಎಂದು ವಾಗ್ದಾಳಿ ಮಾಡಿದ್ದಾರೆ
ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಎಂದು ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಸಂಬಂಧ ತನ್ವೀರ್ ಸೇಠ್ ಪತ್ರ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧದ ಕೇಸ್ ವಾಪಸ್ ಪಡೆದಿಲ್ಲ. ಆದರೆ ದೇಶವಿರೋಧಿ ಕೃತ್ಯವೆಸಗಿದವರ ಕೇಸ್ ವಾಪಸ್ಗೆ ಕೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಗಲಭೆ ಸಡೆಸಿದವರ ರಕ್ಷಣೆ ಮಾಡಲು ಹೊರಟಿದ್ದೀರಲ್ಲ ನೀವು ಭಾರತದವರೇ ಇಲ್ಲೇ ಜೀವನ ನಡೆಸುತ್ತಿದ್ದೀರಾ ಎಂದು ತಿರುಗೇಟು ನೀಡಿದರು. ಒಂದೇ ಪಕ್ಷದಲ್ಲಿದ್ದುಕೊಂಡು ಅವರದ್ದೇ ಪಕ್ಷದವರ ಕೊಲೆ ಪ್ರಯತ್ನ ನಡೆದಿತ್ತು ದೇಶ ವಿರೋಧಿ ಕೆಲಸ ಮಾಡಿದವರ ಪರ ನಿಲ್ಲುತ್ತದೆ ಎಂದು ವಾಗ್ವಾದ ಮಾಡಿದರು.