- Advertisement -
Bagalakote News: ಬಾಗಲಕೋಟ: ಸಹೋದರ ಮನೆಗೆ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡ್ತಾನೆ ಅನ್ನೋ ಕಾರಣಕ್ಕೆ, ಆತನ ಯೋಧ ಸಹೋದರ ಮತ್ತು ತಂದೆ ತಾಯಿ ಸೇರಿ, ಆ ಯುವಕನ ಹತ್ಯೆ ಮಾಡಿದ್ದಾರೆ.
ಬಾಗಲಕೋಟೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅನಿಲ್ ಪರಪ್ಪ ಕಾನಟ್ಟಿ(32) ಮೃತ ವ್ಯಕ್ತಿಯಾಗಿದ್ದಾ ನೆಸಹೋದರ ಯೋಧ ಬಸವರಾಜ ಕಾನಟ್ಟಿ, ತಂದೆ ಪರಪ್ಪ ಕಾನಟ್ಟಿ, ತಾಯಿ ಶಾಂತಾ ಕಾನಟ್ಟಿ ಈ ದೃಷ್ಕೃತ್ಯವೆಸಗಿದ್ದಾರೆ . ತೋಟದ ಮನೆಯಲ್ಲಿ ಸಹೋದರ ಮತ್ತು ತಂದೆ ತಾಯಿ ಸೇರಿ, ಡಿಸೇಲಿ ಸುರಿದು, ಬೆಂಕಿ ಹಚ್ಚಿ ಯುವಕನನ್ನು ಹತ್ಯೆ ಮಾಡಿದ್ದಾರೆ.
ಈ ತಿಂಗಳು 5ನೇ ತಾರೀಖಿನಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಳಗಿ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
- Advertisement -