National news:
ಮೊಗಾದಿಶು: ಆಲ್ ಖೈದಾ ಜೊತೆ ನಂಟಿರುವ ಆಲ್ ಶಬಾಬ್ ಉಗ್ರರು ಸೊಮಾಲಿಯಾ ಹೋಟೆಲ್ ಗೆ ದಾಳಿ ನಡೆಸಿ ಗುಂಡಿನ ಸುರಿಮಳೆಯನ್ನೇ ಸುರಿಸಿದ್ದಾರೆ.ಸೊಮಾಲಿಯಾ ರಾಜಧಾನಿ ಮೊಗಾದಿಶುನಲ್ಲಿ ಈ ದಾಳಿ ನಡೆದಿದೆ.
ಮುಂಬೈನ ತಾಜ್ ಹೋಟೆಲ್ನಲ್ಲಿ ಉಗ್ರರು ಯಾವ ರೀತಿಯ ಹೋಟೆಲನ್ನು ವಶಕ್ಕೆ ಪಡೆದು, ಹತ್ಯಾಕಾಂಡ ನಡೆಸಿದ್ದರೋ ಅದೇ ರೀತಿಯಲ್ಲಿ ಸೊಮಾಲಿಯಾದ ಹಯಾತ್ ಹೋಟೆಲ್ ಮೇಲೆ ದಾಳಿ ನಡೆದಿದೆ. ಸಾಕಷ್ಟು ಸಾವು- ನೋವುಗಳು ವರದಿಯಾಗಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಅಲ್-ಶಬಾಬ್ ಭಯೋತ್ಪಾದಕ ಗುಂಪಿನ ಉಗ್ರರು ಶುಕ್ರವಾರ ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ, ಮನಬಂದಂತೆ ಗುಂಡು ಹಾರಿಸಿದ್ದಾರೆ. ಇದರಿಂದ ಹಲವಾರು ಸಾವು-ನೋವುಗಳು ವರದಿಯಾಗಿವೆ. ಹೋಟೆಲ್ ಒಳಗೆ ಸ್ಫೋಟದ ಸದ್ದು ಕೂಡ ಕೇಳಿಬಂದಿದೆ. ದಾಳಿಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಹಯಾತ್ ಹೋಟೆಲ್ ಮೇಲಿನ ದಾಳಿಯು ಭದ್ರತಾ ಪಡೆಗಳು ಮತ್ತು ಜಿಹಾದಿ ಗುಂಪಿನ ಬಂದೂಕುಧಾರಿಗಳ ನಡುವೆ ಭಾರೀ ಗುಂಡಿನ ಚಕಮಕಿಯನ್ನು ಉಂಟುಮಾಡಿತು. ಉಗ್ರರು ಇನ್ನೂ ಕಟ್ಟಡದೊಳಗೆ ಅಡಗಿಕೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿ ಅಬ್ದುಕದಿರ್ ಹಸನ್ ತಿಳಿಸಿದ್ದಾರೆ. ಬಂದೂಕುಧಾರಿಗಳು ಹೋಟೆಲ್‌ಗೆ ಬಲವಂತವಾಗಿ ನುಗ್ಗುವ ಕೆಲವೇ ನಿಮಿಷಗಳ ಮೊದಲು ಭಾರೀ ಸ್ಫೋಟ ಕೂಡ ಸಂಭವಿಸಿತ್ತು ಎನ್ನಲಾಗಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಜೀವ ಬೆದರಿಕೆ ಕುರಿತು ಸಂಪೂರ್ಣ ತನಿಖೆ- CM ಬೊಮ್ಮಾಯಿ

