- Advertisement -
ಢಾಕಾ: ಮಾಜಿ ಆಲ್ರೌಂಡರ್ ಶ್ರೀಧರನ್ ಶ್ರೀರಮ್ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಂಡದ ತಾಂತ್ರಿಕಾ ಸಲಹೆಗಾರನಾಗಿ ಆಯ್ಕೆ ಮಾಡಿದೆ. ಟಿ20 ವಿಶ್ವಕಪ್‍ವರೆಗೂ ಶ್ರೀಧರನ್ ಕಾರ್ಯನಿರ್ವಹಿಸಲಿದ್ದಾರೆ.
ಶ್ರೀಧರನ್ ಶ್ರೀರಮ್ ಬಾಂಗ್ಲಾ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದಾರೆ ಎನ್ನುವ ವರದಿಯನ್ನು ಬಿಸಿಬಿ ಅಧ್ಯಕ್ಷ ನಜಮುಲ್ ಹಸನ್ ತಳ್ಳಿ ಹಾಕಿದರು.
46 ವರ್ಷದ ಶ್ರೀಧರನ್ ಈ ಹಿಂದೆ ಆಸ್ಟ್ರೇಲಿಯಾ ತಂಡದಲ್ಲಿ ಹಾಗು ಐಪಿಎಲ್‍ನಲ್ಲಿ ಆರ್‍ಸಿಬಿ ತಂಡದ ಪರ ಕಾರ್ಯ ನಿರ್ವಹಿಸಿದ ಅನುಭವ ಇರುವ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಲಾಯಿತು ಎಂದು ಬಾಂಗ್ಲಾ ಕ್ರಿಕೆಟ್‍ಮಂಡಳಿ ಹೇಳಿದೆ.
2016ರಲ್ಲಿ ಶ್ರೀಧರನ್ ಆಸ್ಟ್ರೇಲಿಯಾ ತಂಡದ ಪರ ಅಂದಿನ ಮುಖ್ಯ ಕೋಚ್ ಡೆರೆನ್ ಲೆಹಮಾನ್ ಅಡಿಯಲ್ಲಿ ಸ್ಪಿನ್ ಕೋಚ್ ಆಗಿ ಕೆಲಸ ಮಾಡಿದ್ದರು.
- Advertisement -