ಸ್ವಾವಲಂಬಿ ಭಾರತದ ಕರೆಗೆ ಓಗೊಟ್ಟ ಭಾರತೀಯರು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದ್ದಾರೆ. ಈ ಕಾರಣಕ್ಕೆ ಬಟ್ಟೆ ಮತ್ತು ಪೇಪರ್ ಬ್ಯಾಗ್‌ಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಈ ಉದ್ಯಮದಿಂದ ಒಳ್ಳೆಯ ಲಾಭ ಪಡೆಯಬಹುದಾಗಿದೆ.
ಈಗ ಆಸ್ಪತ್ರೆ, ಶಾಪಿಂಗ್ ಮಾಲ್, ಚಿಕ್ಕ ಪುಟ್ಟ ಅಂಗಡಿ, ಕಿರಾಣಿ ಅಂಗಡಿ, ಬೇಕರಿ ಸೇರಿದಂತೆ ಹಲವೆಡೆ ಪೇಪರ್ ಮತ್ತು ಬಟ್ಟೆ ಬ್ಯಾಗ್‌ಗಳನ್ನು ಬಳಸಲಾಗುತ್ತಿದೆ. ಪೇಪರ್ ಬ್ಯಾಗ್ಸ್ ಆಕರ್ಷಕ ಮತ್ತು ಇಕೋ ಫ್ರೆಂಡ್ಲಿ ಇರುವುದರಿಂದ ಮಾರುಕಟ್ಟೆಯಲ್ಲಿ ಇದರ ಬೆಲೆ ದುಬಾರಿ ಇದೆ.
ಬಟ್ಟೆ ಚೀಲವನ್ನ ಸ್ಟಿಚಿಂಗ್ ಮಷಿನ್ ಕೊಂಡು ತಯಾರಿಸಬಹುದು. ಆದ್ರೆ ಪೇಪರ್ ಚೀಲ ಮಾಡುವುದಕ್ಕೆ ದೊಡ್ಡ ಮಷಿನ್ ಅಗತ್ಯವಿದೆ.
ಈ ಉದ್ಯಮಕ್ಕೆ ಎಷ್ಟು ಬಂಡವಾಳದ ಅಗತ್ಯವಿದೆ ಎಂದು ನೋಡುವುದಾದರೆ, ಪೇಪರ್ ಮಷಿನ್ 5ರಿಂದ 10 ಲಕ್ಷದವರೆಗೆ ಲಭ್ಯವಿದೆ. ಒಂದು ಕೆಜಿ ಕಚ್ಚಾವಸ್ತುವಿನಿಂದ ನೀವು 125 ಬ್ಯಾಗ್ ತಯಾರಿಸಬಹುದು. ಅಲ್ಲದೇ ಒಂದು ಗಂಟೆಯಲ್ಲಿ ಈ ಮಷಿನ್ ಸಹಾಯದ ಮೂಲಕ 7ಸಾವಿರ ಬ್ಯಾಗ್ ರೆಡಿ ಮಾಡಬಹುದು.
ಮಾರುಕಟ್ಟೆಯಲ್ಲಿ 40 ರೂಪಾಯಿಗೆ ಒಂದು ಕೆಜಿ ವಿವಿಧ ತರಹದ ಪೇಪರ್‌ಗಳು ಸಿಗುತ್ತದೆ. ಇದರ ಜೊತೆ ವಿವಿಧ ರೀತಿಯ ಗ್ಲೂಗಳು ಸಿಗುತ್ತದೆ. ಅದನ್ನು ಕೂಡ ನೀವು ಕೊಂಡುಕೊಳ್ಳಬೇಕಾಗುತ್ತದೆ.
ಇನ್ನು 2ರಿಂದ 3 ಕೆಲಸಗಾರರನ್ನು ನೀವು ಈ ಕೆಲಸಕ್ಕೆ ಬಳಸಬೇಕಾಗುತ್ತದೆ. ಈ ಉದ್ಯಮ ಆರಂಭಿಸೋಕ್ಕೆ ನೀವು ಲೋನ್ ಪಡೆದುಕೊಳ್ಳಬಹುದು. ಆನ್‌ಲೈನ್ ಮಾರ್ಕೆಟಿಂಗ್ ಮಾಡಿ ಈ ಉದ್ಯಮದಿಂದ ಲಾಭ ಗಳಿಸಬಹುದು. ಅಲ್ಲದೇ, ನಿಮ್ಮ ಪೇಪರ್ ಬ್ಯಾಗ್‌ಗೆ ನೀವು ಲೋಗೋ ಬಳಸುವುದಿದ್ದರೆ, ಪ್ರಿಂಟಿಂಗ್ ಮಷಿನ್ ಪರ್ಚೆಸ್ ಮಾಡಬೇಕಾಗುತ್ತದೆ. 1ರಿಂದ 10 ಲಕ್ಷದವರೆಗೆ ಇದರ ಬೆಲೆ ಇರುತ್ತದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.