Wednesday, August 20, 2025

Latest Posts

ಅಪ್ಪನನ್ನು ನೋಡಿ ಹೋಡಿದ ಮಗ ಯಥರ್ವ್‌.!

- Advertisement -

‘ಕೆಜಿಎಫ್-2’ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಎಲ್ಲರು ಹೆಮ್ಮೆಪಡುವ ಹಾಗೆ ಮಾಡಿದರು ಯಶ್. ‘ಕೆಜಿಎಫ್-2’ ಬಾಕ್ಸ್ ಆಫೀಸ್‌ನಲ್ಲಿ ಸಕ್ಕತ್ ಸೌಂಡ್ ಮಾಡಿದೆ. ಅದಷ್ಟೇ ಅಲ್ಲದೆ 1000 ಕೋಟಿ ರೂ. ಗಳಿಕೆ ಮಾಡಿ, ಇದೀಗ 1200 ಕೋಟಿಯತ್ತ ಮುಖ ಮಾಡಿದೆ.

‘ಕೆಜಿಎಫ್-2′ ಸಿನಿಮಾವನ್ನು ನೀಡಿರುವ ಯಶ್, ಈಗ ಫ್ಯಾಮಿಲಿ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಯಶ್ ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರು ಬಿಡು ಮಾಡಿಕೊಂಡು ಫ್ಯಾಮಿಲಿಗೂ ಸಮಯ ನೀಡುತ್ತಾರೆ.

ಈಚೆಗಷ್ಟೇ ಮಗಳು ಆಯ್ರಾ, ಸಲಾಂ ರಾಕಿ ಭಾಯ್ ಎಂದು ಹಾಡು ಹೇಳುತ್ತಿರುವ ವಿಡಿಯೋವನ್ನು ಯಶ್ ಹಾಕಿದ್ದರು. ಇದೀಗ ಅವರ ಮಕ್ಕಳ ಜೊತೆ ಇರುವು ಮತ್ತೊಂದು ಕ್ಯೂಟ್ ಫನ್ನಿ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಯಶ್ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯಶ್ ಪುತ್ರ ಯಥರ್ವ್​ ‘ನಾನು ಡೈನೋಸಾರ್​’ ಎಂದು ಕೂಗಿದ್ದಾನೆ. ಇದಕ್ಕೆ ಯಶ್​, ‘ನನಗೆ ಮತ್ತು ಆಯ್ರಾಗೆ ಭಯವಾಗುತ್ತಿದೆ’ ಎಂದಿದ್ದು, ಆನಂತರ ಯಶ್, ‘ನಾನು ಹುಲಿ ಆಗುತ್ತಿದ್ದೇನೆ’ ಎಂದು ಹೇಳುತ್ತಾ, ಘರ್ಜಿಸಿದ್ದಾರೆ. ಅಪ್ಪನ ಘರ್ಜನೆಯನ್ನು ಕಂಡು ಯಥರ್ವ್ ಅಲ್ಲಿಂದ ಓಡಿ ಹೋಗಿದ್ದಾನೆ. ಇನ್ನು ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಅಪ್ಪ ಮಕ್ಕಳ ಈ ಕ್ಯೂಟ್ ವಿಡಿಯೋ ಫ್ಯಾನ್ಸ್‌ಗೆ ಖುಷಿ ನೀಡಿದೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

- Advertisement -

Latest Posts

Don't Miss