ಕರಣ್ ಜೋಹರ್ ಬಾಲಿವುಡ್‌ನ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ನಿರೂಪಕನಾಗಿ ಕೆಲಸ ಮಾಡುತ್ತ ಜನಪ್ರಿಯರಾಗಿದ್ದಾರೆ. ಅದಷ್ಟೇ ಅಲ್ಲದೆ ಬಾಲಿವುಡ್‌ನಲ್ಲಿ ಸ್ಟಾರ್ ಕಿಡ್‌ಗಳನ್ನು ಲಾಂಚ್ ಮಾಡುವುದರಲ್ಲಿ ಕರಣ್ ಸಖತ್ ಫೇಮಸ್. ಇದೆಲ್ಲದರ ಜೊತೆಗೆ ಅನೇಕ ಹಿಟ್ ಸಿನಿಮಾಗಳನ್ನು ಕೂಡ ನಿರ್ದೇಶಿಸಿದ್ದಾರೆ ಹಾಗು ನಿರ್ಮಿಸಿದ್ದಾರೆ.
ಕರಣ್‌ಗೆ ತಮ್ಮ 50ನೇ ವರ್ಷದ ಜನ್ಮದಿನವನ್ನು ಮೇ 25 ರಂದು ಆಚರಿಸಿಕೊಂಡರು. ಕರಣ್ ಪ್ರತಿ ವರ್ಷವೂ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವುದು ಅವರ ಸ್ಪೆಷಾಲಿಟಿ. ಆದರೆ ಈ ಬಾರಿ ಇನ್ನೂ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಇನ್ನು ಅವರ ವಿಶೇಷ ದಿನದಂದು ಕರಣ್ ಜೋಹರ್ ಬಾಲಿವುಡ್ ಸೆಲೆಬ್ರಿಟಿಗಳಿಗೋಸ್ಕರ ಭರ್ಜರಿ ಪಾರ್ಟಿ ಕೂಡ ಆಯೋಜಿಸಿದ್ದರು.
ಈ ಪಾರ್ಟಿಯಲ್ಲಿ ದಕ್ಷಿಣ ಭಾರತದಿಂದ ಪುರಿ ಜಗನ್ನಾಥ್, ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ, ಚಾರ್ಮಿ, ತಮನ್ನಾ ಭಾಟಿಯಾ, ರಕುಲ್ ಪ್ರೀತ್‌ಸಿಂಗ್, ಪೂಜಾ ಹೆಗ್ಡೆ ಭಾವಹಿಸಿದ್ದರು. ಸೈಫ್ ಅಲಿ ಖಾನ್, ಕರೀನಾ ಕಪೂರ್, ನಟ ಸಲ್ಮಾನ್ ಖಾನ್, ಏಕ್ತಾ ಕಪೂರ್, ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಆಮಿರ್ ಖಾನ್, ಜೆನಿಲಿಯಾ ಡಿಸೋಜ, ರಿತೇಶ್ ದೇಶಮುಖ್, ಹೃತಿಕ್ ರೋಶನ್ – ಸಬಾ ಆಜಾದ್, ಕಾಜಲ್, ರಾಣಿ ಮುಖರ್ಜಿ, ಮಲೈಕಾ ಅರೋರ, ಗೌರಿ ಖಾನ್, ಆರ್ಯನ್ ಖಾನ್, ರಣಬೀರ್ ಕಪೂರ್, ನೀತು ಕಪೂರ್, ಪ್ರೀತಿ ಜಿಂಟಾ, ಸೋನಾಲಿ ಬೇಂದ್ರೆ, ಮೌನಿ ರಾಯ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಇನ್ನು ಮುಂತಾದವರು ಭಾಗಿಯಾಗಿದ್ದಾರು.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ