Friday, December 6, 2024

Latest Posts

ಸೌತ್ ಸುಂದರಿ ಕೀರ್ತಿ ಸುರೇಶ್ ಮದುವೆ ಫಿಕ್ಸ್: ಎಲ್ಲಿ ಮದುವೆ..? ಯಾರು ಹುಡುಗ..?

- Advertisement -

Movie News: ಸೌತ್ ಇಂಡಸ್ಟ್ರೀಯ ಪ್ರಸಿದ್ಧ ನಟಿ, ತನ್ನ ಮುದ್ದು ಮುದ್ದಾದ ನಟನೆಯಿಂದಲೇ ಗಮನ ಸೆಳೆದ ಕೀರ್ತಿ ಸುರೇಶ್, ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.

ಅಂದಹಾಗೆ ಕೀರ್ತಿ ಸುರೇಶ್ ಅವರು ನಟ, ನಿರ್ದೇಶಕನೊಂದಿಗೆ ವಿವಾಹವಾಗುತ್ತಿದ್ದಾರೆ ಎಂದು ಹಲವು ಬಾರಿ ಗಾಸಿಪ್‌ ಆಗಿದೆ. ಆದರೆ ಈ ಬಾರಿ ನಿಜಕ್ಕೂ ಕೀರ್ತಿ ಹಸೆಮಣೆ ಏರುತ್ತಿದ್ದು, ತಮ್ಮ ಬಾಲ್ಯದ ಗೆಳೆಯ ಆ್ಯಂಟೋನಿ ತಟ್ವಿಲ್ ಎಂಬುವವರನ್ನು ವಿವಾಹವಾಗುತ್ತಿದ್ದಾರೆ.

ಇವರಿಬ್ಬರೂ ಒಟ್ಟಿಗೆ ಹೈಸ್ಕೂಲ್‌ ಶಿಕ್ಷಣ ಮುಗಿಸಿದ್ದಾರೆ. ಆಗಿಂದಲೇ ಇವರಿಬ್ಬರ ಸ್ನೇಹ ಶುರುವಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿ, ಇಷ್ಟು ವರ್ಷ ಕಾದು, ಈಗ ಮನೆಯವರ ಒಪ್ಪಿಗೆಯೊಂದಿಗೆ ಹಸೆಮಣೆ ಏರುತ್ತಿದ್ದಾರೆ. ಡಿಸೆಂಬರ್ 11 ಮತ್ತು 12ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಇವರಿಬ್ಬರ ಮದುವೆ ಗೋವಾದಲ್ಲಿ ನಡೆಯಲಿದೆ. ಬಳಿಕ ಕೊಚ್ಚಿ, ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ.

ಇನ್ನು ಆ್ಯಂಟೋನಿ ಯಾರು ಎಂಬ ಪ್ರಶ್ನೆಗೆ ಉತ್ತರ, ಇವರೊಬ್ಬ ಉದ್ಯಮಿ. ಕೊಚ್ಚಿಯವರಾಗಿರುವ ಆ್ಯಂಟೋನಿ, ದುಬೈನಲ್ಲಿ ವಾಸವಾಗಿದ್ದಾರೆ. ದುಬೈನಲ್ಲಿ ಹಲವು ಉದ್ಯಮಗಳನ್ನು ಹೊಂದಿದ್ದಾರೆ.

- Advertisement -

Latest Posts

Don't Miss