ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್, ಬಾಹುಬಲಿ ನಾಯಕ ಪ್ರಭಾಸ್ ಒಂದಾಗಿ ಮಾಡ್ತಿರೋ ಮೋಸ್ಟ್ ಅವೇಟೇಡ್ ಸಿನಿಮಾ ಸಲಾರ್. ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಬ್ಯಾನರ್ ನಡಿ ತಯಾರಾಗುತ್ತಿರುವ ಬಹುಕೋಟಿ ಬಜೆಟ್ ಸಿನಿಮಾ ಸಲಾರ್ ಮುಹೂರ್ತ ಇತ್ತೇಚೆಗಷ್ಟೇ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಸ್ಟಾರ್ ಡೈರೆಕ್ಟರ್-ಸ್ಟಾರ್ ಪ್ರೊಡ್ಯುಸರ್-ಸ್ಟಾರ್ ಹೀರೋ ನಟಿಸ್ತಿರೋ ಸಿನಿಮಾ ಅಂದ್ರೆ ನಿರೀಕ್ಷೆಗಳು ದುಪ್ಪಟ್ಟು ಇರುತ್ತೇ. ಅದರಂತೆ ಸಲಾರ್ ಸಿನಿಮಾ ನಾಯಕಿ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಬಿಲ್ಡ್ ಆಗಿದ್ದಂತು ಸುಳ್ಳಲ್ಲ.


ಪ್ರಭಾಸ್ ಜೊತೆ ಡುಯೇಟ್ ಆಡೋದಿಕ್ಕೆ ಬಾಲಿವುಡ್ ನ ಹಾಟ್ ಬಾಂಬ್ ದಿಶಾ ಬರ್ತಾಳೆ.. ಇಲ್ಲ ಕತ್ರೀನಾ ಕೈಫ್ ಬರ್ತಾಳೆ ಅನ್ನೋ ಸುದ್ದಿ ಗಾಂಧಿನಗರದಿಂದ ಬಾಲಿವುಡ್ ಗಲ್ಲಿ-ಗಲ್ಲಿಯಲ್ಲಿಯೂ ಸೌಂಡ್ ಮಾಡಿತ್ತು. ಬಟ್ ಸಿನಿಮಾ ತಂಡ ಮಾತ್ರ ಈ ಬಗ್ಗೆ ಸ್ವಲ್ಪವೂ ಹಿಂಟ್ ಕೊಟ್ಟಿರಲಿಲ್ಲ. ಇದೀಗ ನಾಯಕಿ ಹುಟ್ಟುಹಬ್ಬದ ದಿನವೇ ಸಲಾರ್ ಹೀರೋಯಿನ್ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ ಸಿನಿಮಾ ಟೀಂ.
ಡಾರ್ಲಿಂಗ್ ಗೆ ಶೃತಿ ಹಾಸನ್ ಜೋಡಿ
ಸಲಾರ್ ಸಿನಿಮಾಕ್ಕೆ ಸೌತ್ ಇಂಡಸ್ಟ್ರೀಯ ಬ್ಯೂಟಿ, ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಎಂಟ್ರಿ ಕೊಟ್ಟಿದ್ದಾರೆ. ಇಂದು ಶೃತಿ ಹುಟ್ಟುಹಬ್ಬದ ಹಿನ್ನೆಲೆ ಸಲಾರ್ ಟೀಂ ಈ ಬಗ್ಗೆ ಅನೌನ್ಸ್ ಮಾಡಿದೆ. ಫರ್ ದ ಫಸ್ಟ್ ಟೈಮ್ ಶೃತಿ ಜೊತೆ ಡಾರ್ಲಿಂಗ್ ತೆರೆ ಹಂಚಿಕೊಳ್ತಿದ್ದಾರೆ. ಶೃತಿ ಬರ್ತ್ ಡೇಗೆ ವಿಷ್ ಮಾಡಿರುವ ಪ್ರಭಾಸ್, ಹ್ಯಾಪಿ ಬರ್ತ್ ಡೇ. ನಿಮ್ಮ ಜೊತೆ ಸಲಾರ್ ನಲ್ಲಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಪೋಸ್ಟ್ ಹಾಕಿದ್ದಾರೆ.
ಈ ತಿಂಗಳಾಂತ್ಯಕ್ಕೆ ಶೂಟಿಂಗ್ ಮಾಡೋದಿಕ್ಕೆ ಚಿತ್ರತಂಡ ರೆಡಿಯಾಗಿದ್ದು, ಆಲ್ ಮೋಸ್ಟ್ ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿರುವ ಕಲಾವಿದರ ತಂಡ ಇಲ್ಲಿರಲಿದೆ.