Sunday, September 8, 2024

Latest Posts

South Central Railway ಹುದ್ದೆಗಳಿಗೆ ಅರ್ಜಿ ಆಹ್ವಾನ..!

- Advertisement -

ದಕ್ಷಿಣ ಮಧ್ಯ ರೈಲ್ವೆ(South Central Railway) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 21 ಸ್ಪೋರ್ಟ್ಸ್​ ಕೋಟಾ(Sports Quota) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​ (Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ scr.indianrailways.gov.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆ ಕುರಿತ ಮಾಹಿತಿ,

ವಿದ್ಯಾರ್ಹತೆ
ದಕ್ಷಿಣ ಮಧ್ಯ ರೈಲ್ವೆ ನೇಮಕಾತಿಯ ಸ್ಪೋರ್ಟ್ಸ್​ ಕೋಟಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ 10ನೇ ತರಗತಿ, 12 ನೇ ತರಗತಿ, ಐಟಿಐ ಪೂರ್ಣಗೊಳಿಸಿರಬೇಕು.

ವಯೋಮಿತಿ
ದಕ್ಷಿಣ ಮಧ್ಯ ರೈಲ್ವೆ ನೇಮಕಾತಿಯ ಸ್ಪೋರ್ಟ್ಸ್​ ಕೋಟಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಜನವರಿ 1, 2022ಕ್ಕೆ 18-25 ವರ್ಷದೊಳಗಿರಬೇಕು.

ಅರ್ಜಿ ಶುಲ್ಕ
SC/ST/ಮಹಿಳೆ/ಅಲ್ಪಸಂಖ್ಯಾತ/EBC ಅಭ್ಯರ್ಥಿಗಳ ಕುಟುಂಬದ ಆದಾಯವು ವಾರ್ಷಿಕ 50000/- ಕ್ಕಿಂತ ಕಡಿಮೆ ಇದ್ದರೆ 250 ರೂ. ಅರ್ಜಿ ಶುಲ್ಕ.
ಎಲ್ಲಾ ಇತರ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ

ಅರ್ಜಿ ಸಲ್ಲಿಕೆ ದಿನಾಂಕ
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17/01/2022

ಆಯ್ಕೆ ಪ್ರಕ್ರಿಯೆ
ಕ್ರೀಡಾ ಪ್ರಯೋಗಗಳು
ಕ್ರೀಡಾ ಸಾಧನೆ
ಶೈಕ್ಷಣಿಕ ಅರ್ಹತೆ.

- Advertisement -

Latest Posts

Don't Miss