ಇಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 61 ನೇ ವರ್ಷಕ್ಕೆ ಕಾಲಿಡುತ್ತಿರುವ ರವಿಚಂದ್ರನ್ ಅವರಿಗೆ ‘ತ್ರಿವಿಕ್ರಮ’ ಚಿತ್ರತಂಡ ವಿಶೇಷ ಉಡುಗೊರೆಯೊಂದನ್ನ ನೀಡಿದೆ.
ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ಮೊದಲ ಬಾರಿಗೆ ‘ತ್ರಿವಿಕ್ರಮ’ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ರವಿಚಂದ್ರನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಒಂದು ವಿಶೇಷ ಉಡುಗೊರೆಯನ್ನ ‘ತ್ರಿವಿಕ್ರಮ’ ಚಿತ್ರತಂಡ ನೀಡಿದೆ.
ಜೂನ್ 24ರಂದು ಈ ಸಿನಿಮಾ ತೆರೆಗೆ ಬರುತ್ತಿದ್ದು, ಈ ಹಿಂದೆ ಈ ಚಿತ್ರದ ‘ಪ್ಲೀಸ್ ಮಮ್ಮಿ’ ಸಾಂಗ್ ನ ಲಿರಿಕಲ್ ವಿಡಿಯೋ ರಿಲೀಸ್ ಆಗಿತ್ತು. ಇದೀಗ ರವಿ ಮಾಮನ ಹುಟ್ಟುಹಬ್ಬದ ಹಿನ್ನೆಲೆ ಈ ಹಾಡಿನ ವಿಡಿಯೋವನ್ನು ರಿಲೀಸ್ ಮಾಡಲಾಗಿದೆ. ಇದಷ್ಟೇ ಅಲ್ಲದೆ ವಿಶೇಷವೇನೆಂದರೆ, ಈ ವಿಡಿಯೋ ಸಾಂಗ್ ಅನ್ನು ಶಿವಣ್ಣ ಅವರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ನಂತರ ಶಿವಣ್ಣ ಮಾತನಾಡಿ “ರವಿಚಂದ್ರನ್ ಮತ್ತು ನಾನು ಒಟ್ಟಿಗೆ ಇಂಡಸ್ಟ್ರಿಗೆ ಬಂದವರು. ಬಾಲ್ಯದಿಂದಲೂ ನಮ್ಮ ಮಧ್ಯೆ ಒಳ್ಳೆಯ ಒಡನಾಟ ಇದೆ. ಈಗಾಗಲೇ ಮನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಹೀರೋ ಆಗಿ ವಿಕ್ಕಿ ಲಾಂಚ್ ಆಗ್ತಿರೋದು ಖುಷಿಯ ವಿಚಾರ” ಎಂದು ಹೇಳಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ