ಕನ್ನಡ ಚಿತ್ರರಂಗದ ಏಳಿಗೆಗಾಗಿ ಮಹಾಯಾಗ ನಡೆಸಲಾಗಿದೆ. ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ನಡೆದಿದೆ. ಗಣಯಾಗ, ಆಶ್ಲೇಷ ಬಲಿ, ಸರ್ಪ ಶಾಂತಿ, ಮೃತ್ಯುಂಜಯ ಹೋಮ ಜರುಗಿದೆ.
ಈ ವಿಶೇಷ ಪೂಜೆಯನ್ನು ಉಡುಪಿಯ ಪ್ರಕಾಶ್ ಅಮ್ಮಣ್ಣಯ್ಯ 8 ಜನರ ಪುರೋಹಿತರ ತಂಡ ನೆರವೇರಿಸಿದೆ. ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು,ಸೇರಿದಂತೆ ಒಟ್ಟು 500 ಜನ ಇದರಲ್ಲಿ ಪಾಲ್ಗೊಂಡರು.
ನಟರಾದ ಜಗ್ಗೇಶ್, ದೊಡ್ಡಣ್ಣ, ರಾಕ್ಲೈನ್ ವೆಂಕಟೇಶ್, ಸುಮಲತಾ, ಜಯಮಾಲಾ, ಅಂಜಲಿ, ಗಿರಿಜಾ ಲೋಕೇಶ್, ಪದ್ಮಾ ವಾಸಂತಿ, ಪದ್ಮಜಾರಾವ್, ಮಾಲತಿ ಶ್ರೀ ಮೈಸೂರು, ನಟಿಯರಾದ ರಾಗಿಣಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿರೋ ಜಗ್ಗೇಶ್, ಈ ಪೂಜೆಯನ್ನು ದರ್ಶನ್ಗಾಗಿ ಮಾಡಿಲ್ಲ. ಒಂದು ವೇಳೆ ದರ್ಶನ್ಗಾಗಿ ಮಾಡಿದ್ರೆ ನಾನು ಪೂಜೆಯಲ್ಲಿ ಭಾಗಿಯಾಗ್ತಿರಲಿಲ್ಲ. ಇದು ಚಿತ್ರರಂಗ ಒಲಿತಿಗಾಗಿ ಮಾಡಿರೋ ಪೂಜೆ ಎಂದು ಹೇಳಿದ್ರು.




