Special Interview: ಡ್ರಾಮಾ ಜ್ಯೂನಿಯರ್ ಗಟ್ಟಿಮೇಳ ಮಹತಿ ಲೈಫಲ್ಲಿ ಮೆಗಾ ಟ್ವಿಸ್ಟ್

Special Interview: ಮಹತಿ ಭಟ್. ಸದ್ಯ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಸಖತ್ ಬೇಡಿಕೆ ಇರುವ ನಟಿ. ಅದರಲ್ಲೂ ಕನ್ನಡ ಸಿರಿಯಲ್‌ಗಳಲ್ಲಿ ನೀವು ಇವರನ್ನ ನೋಡಿರುತ್ತೀರಿ. ಆದರೆ ಇದೆಲ್ಲದಕ್ಕೂ ಮುಂಚೆ ನೀವು ಇವರನ್ನು ನೋಡಿದ್ದು ಡ್ರಾಮಾ ಜೂನಿಯರ್ಸ್ ಸೀಸನ್ 1ನಲ್ಲಿ. ಅದಾದ ಬಳಿಕ ಮಹತಿ ಕನ್ನಡದ ಹಲವು ಸಿರಿಯಲ್‌ನಲ್ಲಿ ನಟಿಸಿದ್ದಾರೆ.

ಇದೀಗ ಮಹತಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಡ್ರಾಮಾ ಜೂನಿಯರ್ಸ್ ಆಡಿಷನ್ ಇದ್ದಾಗ, ಶಿವಮ“ಗ್ಗದಲ್ಲಿ 300ಕ್ಕೂ ಹೆಚ್ಚು ಮಕ್ಕಳ ನಡುವೆ ನಾನು ಆಯ್ಕೆಯಾಗಿದ್ದೆ. ಬಳಿಕ ಡ್ರಾಮಾ ಜೂನಿಯರ್ಸ್ ಶೋಗೆ ಭಾಗವಹಿಸುವ ಅವಕಾಶ ನನಗೆ ಸಿಕ್ಕಿತು. ಅದಾದ ಬಳಿಕ ನನ್ನ ಜೀವನಕ್ಕೆ ತಿರುವು ಸಿಕ್ಕಿದ್ದು, ಹಲವು ನಟನಾ ಅವಕಾಶ ಪಡೆದಿದ್ದೇನೆ ಅಂದಿದ್ದಾರೆ ಮಹತಿ.

ಡ್ರಾಮಾ ಜೂನಿಯರ್ಸ್‌ನಲ್ಲಿ ಹಲವು ರೀತಿಯ ಪಾತ್ರಗಳನ್ನು ನಾನು ನಿರ್ವಹಿಸಿದ್ದೆ. ಅಜ್ಜಿ, ಹೆಂಡತಿ ಪಾತ್ರ, ಮಗನನ್ನು ಕಳೆದುಕ“ಂಡಿರುವ ತಾಯಿ, ಹೀಗೆ ಹಲವು ಪಾತ್ರಗಳನ್ನು ನಾನು ನಿಭಾಯಿಸಿದ್ದೆ. ಹಾಗಾಗಿ ಅಲ್ಲಿಯೇ ನನಗೆ ನಟನಾ ತರಬೇತಿ ಸಿಕ್ಕ ಹಾಗಾಯಿತು.

ಇನ್ನು ತನ್ನ ಈ ಪಯಣದಲ್ಲಿ ಅಣ್ಣ, ತಂದೆ ತಾಯಿ, ಅಜ್ಜಿ ತಾತನ ಪಾತ್ರ ಮರೆಯದ ಮಹತಿ, ನನಗೆ ಅಪ್ಪ ಅಮ್ಮ ತುಂಬಾ ಬೆಂಬಲಿಸಿದ್ದಾರೆ. ಅಪ್ಪ ಅಮ್ಮ ಬ್ಯುಸಿ ಇದ್ದಾಗ, ನನ್ನ ಅಜ್ಜಿ ತಾತ ಅಂದ್ರೆ ಅಮ್ಮನ ಅಪ್ಪ ಅಮ್ಮ ನನ್ನನ್ನು ಪ್ರಾಕ್ಟೀಸ್‌ಗೆ, ಸಿರಿಯಲ್‌ ಸೆಟ್‌ಗೆ ಕರೆದುಕ“ಂಡು ಹೋಗಿದ್ದಾರೆ. ಇಂಥ ಫ್ಯಾಮಿಲಿ ಪಡೆಯಲು ನಾನು ಪುಣ್ಯ ಮಾಡಿದ್ದೆ ಎಂದು ಹೇಳಿದ್ದಾರೆ.

ಮಹತಿ ತನ್ನ ಸಿನಿ ಪಯಣದ ಬಗ್ಗೆ ಹಲವು ವಿಷಯಗಳನ್ನು ಹಂಚಿಕ“ಂಡಿದ್ದಾರೆ. ಪೂರ್ತಿ ಸಂದರ್ಶನದ ವೀಡಿಯೋ ನೋಡಲು ಈ ವೀಡಿಯೋ ಕ್ಲಿಕ್ ಮಾಡಿ.

About The Author