www.karnatakatv.net : ರಾಯಚೂರು : ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಲು ಮುಂದಾಗಿದ್ದಲ್ಲದೇ, ಮನೆ ಮನೆಗಳಿಗೆ ತೆರಳಿ ಮಕ್ಕಳಿಗೆ ಚಂದನ ವಾಹಿನಿಯ ಪಾಠದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅಷ್ಟಕ್ಕೂ ಆ ಶಾಲೆ ಯಾವುದು ಅಂತೀರ ಈ ಸ್ಟೋರಿ ನೋಡಿ..
ವಠಾರ ಶಾಲೆ ಮೂಲಕ ಮಕ್ಕಳ ಕಲಿಕೆಗೆ ವಿಶೇಷ ಪ್ಲಾನ್..ಮಕ್ಕಳ ದಾಖಲಾತಿ ಹೆಚ್ಚಿಸಲು ಕೆಸರಟ್ಟಿ ಶಾಲೆ ಶಿಕ್ಷಕರ ನಯಾ ಐಡಿಯಾ
ಕೋವಿಡ್ ಮಹಾಮಾರಿಯಿಂದ ಸತತ ಎರಡು ವರ್ಷ ಇಡೀ ದೇಶ ಲಾಕ್ ಡೌನ್ ಆಗಿದ್ದಾಯ್ತು. ಶಾಲೆಗಳು ನಡೆಯದೇ ಇದ್ದಾಗ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ಮಕ್ಕಳು ಸಂಪೂರ್ಣವಾಗಿ ಕಲಿಕೆಯಿಂದ ಹೊರಗುಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.. ಆ ವೇಳೆ ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಕೆಸರಟ್ಟಿ ಶಾಲೆಯ ಶಿಕ್ಷಕರು ಇಡೀ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಠಾರ ಶಾಲೆ ಆರಂಭಿಸಲು ಮುಂದಾಗಿದ್ದಾರೆ. ಮಕ್ಕಳ ಕಲಿಕೆಯನ್ನು ಉತ್ತೇಜಿಸಲು ಶಿಕ್ಷಕರು ಮಾಡಿರುವ ಈ ಪ್ಲಾನ್ ಸಖತ್ ವರ್ಕೌಟ್ ಆಗಿದ್ದು, ಮಕ್ಕಳು ಶಾಲೆ ಕಡೆಗೆ ಮಖ ಮಾಡುತ್ತಿದ್ದಾರೆ. ಈ ಶಾಲೆ ಮಾಡಿರುವ ಶಿಕ್ಷಕರಿಗೆ ಊರಿನ ಪೋಷಕರಿಂದ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಶಾಲೆ ರಾಜ್ಯಕ್ಕೆ ಮಾದರಿಯಾಗಿದೆ .