ಗುರುಪೂರ್ಣಿಮೆಯ ಹಿನ್ನೆಲೆ ಮಂತ್ರಾಲಯದಲ್ಲಿ ವಿಶೇಷ ಪೂಜೆ

www.karnatakatv.net : ರಾಯಚೂರು : ಆಶಾಢ ಸುಧಾಗುರುಪೂರ್ಣಿಮ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಮೃತೀಕಾ ಸಂಗ್ರಹ ಧಾರ್ಮಿಕ ಕಾರ್ಯಕ್ರಮ ಸ್ವಾಮೀಜಿಯ ಸಮೂಹದಲ್ಲಿ   ನಡೆಯಿತು . ತುಂಗಭದ್ರ ನದಿ ದಡದಲ್ಲಿರುವ ತುಳಸಿ ವನದಲ್ಲಿ ಮೃತಿಕಾ ಸಂಗ್ರಹಿಸಿದ ಶ್ರೀಗಳು.

ಶ್ರೀಗಳು ಸಂಗ್ರಹಿಸಿದ ಮೃತಿಕಾ ರಾಯರ ಮೂಲ ಬೃಂದಾವನಕ್ಕೆ ಸಮರ್ಪಣೆ ಮಾಡಿದರು . ರಾಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ಮಾಡಿದರು . ಮೃತಿಕಾ ಸಂಗ್ರಹಕ್ಕೆ ಸಾಥ್ ನೀಡಿದ  ಶ್ರೀಮಠದ ವಿದ್ಯಾಪೀಠದ ವಿದ್ಯಾರ್ಥಿಗಳು.ರಾಯರ ಮೂಲ ಬೃಂದಾವನದ ಮೇಲೆ ಸಂಗ್ರಹಿಸಿಡುವ ಮೃತೀಕಾ ಭಕ್ತರಿಗೆ ನೀಡಲಾಗುತ್ತದೆ‌. ನಂತರ ರಾಯರ ದರ್ಶನಕ್ಕೆ  ಅವಕಾಶ ನೀಡಿದರು. ಇಂದು ಗುರು ಪೂರ್ಣಿಮಾ ಹಿನ್ನೆಲೆಯಲ್ಲಿ ಕರ್ನಾಟಕ ಆಂಧ್ರ ಹಾಗೂ ತೆಲಂಗಾಣ  ರಾಜ್ಯ ದಿಂದ ಭಕ್ತರು ಆಗಮಿಸುತ್ತಾರೆ .

About The Author