International News:
ಪ್ರಕೃತಿಯ ವಿಸ್ಮಯಕ್ಕೆ ಮನಸೋಲದವರ್ಯಾರು. ಹಾಗೆ ಇಲ್ಲಿ ನೆಟ್ಟಿಗರು ಸಂಚಲನ ಮೂಡಿಸಿದ ಕಾಮನ ಬಿಲ್ಲಿನ ವೀಡಿಯೋ ಗೆ ಫುಲ್ ಫಿದಾ ಆಗಿದ್ದಾರೆ. ಇದೊಂದು ಅಪರೂಪದ ಕಾಮನಬಿಲ್ಲು. ಚೀನಾದ ಬಾನಂಗಳದಲ್ಲಿ ಕಂಡಿದೆ. ಇಷ್ಟು ಗಾಢವರ್ಣಗಳಲ್ಲಿ ಇದು ಮೂಡಿದಾಗ ನೋಡುಗರಲ್ಲಿ ತೀವ್ರ ಸಂಚಲನ ಮೂಡದಿರಲು ಸಾಧ್ಯವೆ? ಈ ವಿಡಿಯೋ ಈಗ ವೈರಲ್ ಆಗಿದ್ದು ನೆಟ್ಟಿಗರು ಅಚ್ಚರಿಯಿಂದ ನೋಡುತ್ತಿದ್ದಾರೆ. ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ನಲ್ಲಿ ಪನೋರಮಾ ಶಾಟ್ನೊಂದಿಗೆ ವಿಡಿಯೋ ಆರಂಭವಾಗುತ್ತದೆ.
ವಿಡಿಯೋ 27.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಸಾವಿರಾರು ಪ್ರತಿಕ್ರಿಯೆಗಳನ್ನು ಪಡೆದಿದೆ. ನ್ಯೂಫ್ಲೇರ್ ಪ್ರಕಾರ, ಈ ವಿಡಿಯೋ ಅನ್ನು ಆಗಸ್ಟ್ 21 ರಂದು ಹೈನಾನ್ ಪ್ರಾಂತ್ಯದ ಹೈಕೌ ನಗರದಲ್ಲಿ ಚಿತ್ರೀಕರಿಸಲಾಗಿದೆ. ‘ಈ ಸ್ಕಾರ್ಫ್ ಕ್ಲೌಡ್ ಅನ್ನು ಪೈಲಿಯಸ್ ಎಂದೂ ಕರೆಯುತ್ತಾರೆ, ತೇವಾಂಶವುಳ್ಳ ಗಾಳಿ ಕ್ರಮೇಣ ಘನೀಕರಣಗೊಳ್ಳುತ್ತಾ ಹೋಗುತ್ತದೆ. ಸೂರ್ಯನ ಬೆಳಕು ಬಲಕೋನದಿಂದ ಬಿದ್ದಾಗ ಮೋಡದಲ್ಲಿನ ಹನಿಗಳು ಮತ್ತು ಮಂಜುಗಡ್ಡೆಯ ಸ್ಫಟಿಕಗಳ ನಡುವೆ ಬೆಳಕು ಮಿಳಿತಗೊಂಡು ಕಾಮನಬಿಲ್ಲಿನ ಬಣ್ಣವನ್ನು ಸೃಷ್ಟಿಸುತ್ತದೆ.’ ಇಲ್ಲಿ ಮೂಡಿರೋ ಈ ಕಾಮನಬಿಲ್ಲಿನ ದೃಶ್ಯ ರವಿವರ್ಮನೇ ನಾಚುವಂತಿದೆ.