ಇವತ್ತು ನಾವು ಆಷಾಢ ಮಾಸದ ವಿಶೇಷತೆ ಏನು..? ಆಷಾಢದಲ್ಲಿ ದೇವಿಯ ಪೂಜೆ ಏಕೆ ಹೆಚ್ಚು ಮಹತ್ವ ಪಡೆದಿರುತ್ತದೆ..? ಮತ್ತು ಆಷಾಢದಲ್ಲಿ ಹೊಸದಾಗಿ ಮದುವೆಯಾದವರು ಏಕೆ ಸೇರಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ದಕ್ಷಿಣಾಯಣದ ಪುಣ್ಯ ಕಾಲ ಆರಂಭವಾಗುವ ಮಾಸ ಅಂದ್ರೆ ಆಷಾಢ ಮಾಸ. ಈ ತಿಂಗಳು ಪ್ರತಿ ಶುಕ್ರವಾರ ಸಂಜೆ ಲಕ್ಷ್ಮೀ ದೇವಿಯ ಪೂಜೆ ಮಾಡಿ ಸುಮಂಗಲಿಯರಿಗೆ ಅರಿಶಿನ ಕುಂಕುಮ ನೀಡಲಾಗುತ್ತದೆ. ಇದರಿಂದ ಪತಿ ಆಯುಷ್ಯ ಹೆಚ್ಚುತ್ತದೆ. ಮನೆಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.
ಅಲ್ಲದೇ ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು ಈ ಮಾಸದಲ್ಲೇ. ಗಂಗೆ ಶಿವನ ಜಟೆಯಿಂದ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಕೂಡ ಆಷಾಢ ಮಾಸದಲ್ಲೇ.
ಇಷ್ಟೇ ಅಲ್ಲದೇ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೂ ಪ್ರತಿವರ್ಷ ಆಷಾಢ ಶುಕ್ರವಾರದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇವಿಗೆ ವಿವಿಧ ತರಹದ ಅಲಂಕಾರ ಮಾಡಲಾಗುತ್ತದೆ. ದೇವಸ್ಥಾನದ ತುಂಬ ತರಕಾರಿ ಮತ್ತು ಹೂವಿನಿಂದ ಅಲಂಕಾರ ಮಾಡಲಾಗುತ್ತದೆ. ಅಲಂಕಾರಭರಿತಳಾದ ಚಾಮುಂಡಿಯನ್ನ ಕಣ್ತುಂಬಿಕೊಳ್ಳೋಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ. ಈ ದಿನ ಭಕ್ತರಿಗೆ ವಿಶೇಷ ಪ್ರಸಾದ ವಿತರಣೆಯೂ ಇರುತ್ತದೆ.
ಇನ್ನು ಆಷಾಢ ಮಾಸ ಶುರುವಾಗುವಾದಗಲೇ ಮಳೆ ಆರಂಭವಾಗುತ್ತದೆ. ಅಲ್ಲದೇ, ಈ ತಿಂಗಳಲ್ಲಿ ಶುಭಕಾರ್ಯಗಳು ಯಾವುದು ನಡೆಯುವುದಿಲ್ಲ. ಹೊಸದಾಗಿ ಮದುವೆಯಾದ ಗಂಡ ಹೆಂಡತಿ ಕೂಡ ಈ ಮಾಸದಲ್ಲಿ ಒಂದಾಗಿರುವುದಿಲ್ಲ. ಇದಕ್ಕೆ ಕಾರಣವೇನು ಅಂತಾ ನೋಡೋದಾದ್ರೆ, ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಮಳೆಗಾಲ ಶುರುವಾದ ಬಳಿಕ ಹೊಲ ಗದ್ದೆಗಳಲ್ಲಿ ಹೆಚ್ಚಿನ ಕೆಲಸವಿರುತ್ತಿತ್ತು. ಈ ಟೈಮಲ್ಲಿ ದುಡಿದರೇನೇ ಒಳ್ಳೆಯ ಫಸಲು ಸಿಗಲು ಸಾಧ್ಯವಾಗುತ್ತಿತ್ತು. ಈ ವೇಳೆಯಲ್ಲಿ ಕೆಲಸ ಮಾಡುವುದನ್ನ ಬಿಟ್ಟು ಗಂಡ ಎಲ್ಲಿ ಹೆಂಡತಿಯ ಸಂಗದಲ್ಲೇ ಕಾಲ ಕಳೆದುಬಿಡುತ್ತಾನೋ ಏನೋ ಅಂತಾ ಆ ಒಂದು ತಿಂಗಳು ಹೆಂಡತಿಯನ್ನ ತವರು ಮನೆಗೆ ಕಳಿಸುತ್ತಿದ್ದರಂತೆ. ಈ ಪದ್ಧತಿ ಈಗಲೂ ಮುಂದುವರಿದುಕೊಂಡು ಬಂದಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.