Thursday, October 16, 2025

Latest Posts

ಶ್ರಾವಣ ಮಾಸದ ವಿಶೇಷತೆ ಏನು..? ಶಿವನಾಮಸ್ಮರಣೆಗೆ ಈ ತಿಂಗಳು ಶ್ರೇಷ್ಠವೇಕೆ..?

- Advertisement -

ಹಿಂದೂಗಳ ಹಬ್ಬ ಹರಿದಿನ ಶುರುವಾಗುವ ತಿಂಗಳಾದ ಶ್ರಾವಣ ಮಾಸವನ್ನ ಪವಿತ್ರ ಮಾಸವೆಂದೇ ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ನಾಗಪಂಚಮಿ, ವರಮಹಾಲಕ್ಷ್ಮೀ ಹಬ್ಬ, ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ, ಹೀಗೆ ಸಾಲು ಸಾಲು ಹಬ್ಬಗಳು ಶುರುವಾಗುತ್ತದೆ.

ಇಷ್ಟೇ ಅಲ್ಲದೇ ಶ್ರಾವಣ ಮಾಸದಲ್ಲಿ ಕೆಲ ವೃತಾಚರಣೆಗಳನ್ನ ಕೂಡ ಮಾಡಲಾಗುತ್ತದೆ. ವಿಶೇಷ ಪೂಜೆ, ಹೋಮ ಹವನ, ಜಪ-ತಪ ಮಾಡಲಾಗುತ್ತದೆ.

ಕೆಲವರು ಶ್ರಾವಣದಲ್ಲಿ ಮೊಟ್ಟೆ ಮಾಂಸವನ್ನ ಸೇವನೆ ಮಾಡಲ್ಲ, ಅಲ್ಲದೇ ಶ್ರಾವಣ ಮಾಸದಲ್ಲಿ ಕೂದಲು ಕತ್ತರಿಸುವುದು ಕೂಡ ಕೆಲವೆಡೆ ನಿಷೇಧವಿದೆ.

ಇನ್ನು ಶ್ರಾವಣ ಮಾಸದಲ್ಲಿ ಶಿವನ ನಾಮಸ್ಮರಣೆ ಮಾಡಲಾಗುತ್ತದೆ. ಬೇಗ ಮದುವೆಯಾಗಬೇಕೆನ್ನುವವರು ಪ್ರತಿ ಶ್ರಾವಣ ಸೋಮವಾರ ಉಪವಾಸ ಮಾಡಿ, ಶಿವನ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಬೇಕು. ಅಲ್ಲದೇ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದರಿಂದ ನಮ್ಮ ಫಲಾಪೇಕ್ಷೆಗಳು ಈಡೇರುತ್ತದೆ ಎಂಬ ನಂಬಿಕೆ ಇದೆ.

ಶಿವಲಿಂಗಕ್ಕೆ ಜಲಾಭಿಷೇಕ ಮಾಡುವಾಗ ಲಿಂಗವನ್ನು ಮುಟ್ಟಬಾರದು. ಯಾಕಂದ್ರೆ ಶಿವ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ ಎಂದು ಹೇಳಲಾಗಿದ್ದು, ಲಿಂಗವನ್ನ ಮುಟ್ಟಿದ್ರೆ ಆತನ ಧ್ಯಾನ ಭಂಗ ಮಾಡಿದಂತಾಗುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಪ್ರತಿ ಶ್ರಾವಣ ಸೋಮವಾರ ಅಥವಾ ನಿಮಗೆ ಸಮಯ ಸಿಕ್ಕರೆ ಪ್ರತಿದಿನ 108 ಬಾರಿ ಓಂ ನಮಃ ಶಿವಾಯ ಎಂಬ ಮಂತ್ರ ಪಠಿಸುವುದರಿಂದ ನೀವು ಶಿವನ ಕೃಪೆಗೆ ಪಾತ್ರರಾಗುತ್ತೀರಾ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss