Saturday, July 12, 2025

Latest Posts

ಕೊರೊನಾದಿಂದ ಗುಣಮುಕ್ತರಾಗಿ ಡಿಸ್ಚಾರ್ಜ್ ಆದ ಸಿಎಂ ಯಡಿಯೂರಪ್ಪ..

- Advertisement -

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇಖಡಾ, 71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು ಈ ಬಾರಿ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಮತ್ತು ಮಧುಗಿರಿ ಮೂರನೇ ಸ್ಥಾನದಲ್ಲಿದ್ದು, ಮಂಡ್ಯ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಕೊನೆಯ ಸ್ಥಾನದಲ್ಲಿ ಯಾದಗಿರಿ ಇದೆ.

SSLC ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿದ ಸಚಿವ ಸುಧಾಕರ್, SSLC ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರಿವುದು ಹೆಮ್ಮೆಯ ಸಂಗತಿ. ಚಿಕ್ಕಬಳಪುರದ ಶಾಸಕನಾಗಿ, ಜಿಲ್ಲಾ ಉಸ್ತುವಾರಿ ಸಚಿವವನಾಗಿ ಇದು ಅತೀವ ಸಂತಸ ತಂದಿದೆ. ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಿಕ್ಷಕರಿಗೆ ನನ್ನ ವಿಶೇಷ ಅಭಿನಂದನೆಗಳು.ಮಕ್ಕಳ ಯಶಸ್ಸಿಗೆ ಕಾರಣರಾದ ಪೋಷಕರಿಗೆ, ಶಿಕ್ಷಕರಿಗೂ ನನ್ನ ಅಭಿನಂದನೆಗಳು. ಪರೀಕ್ಷೆಯಲ್ಲಿ ಸಫಲರಾಗದ ಅಥವಾ ನಿರೀಕ್ಷಿತ ಫಲಿತಾಂಶ ಬರದ ವಿದ್ಯಾರ್ಥಿಗಳಿಗೆ ನನ್ನ ಕಿವಿಮಾತು- ಕೇವಲ ಅಂಕಗಳೇ ಪ್ರತಿಭೆಯ ಮಾನದಂಡವಲ್ಲ. ಧೃತಿಗೆಡದೆ ಸಕಾರಾತ್ಮಕವಾಗಿ ಮುಂದಿನ ಹೆಜ್ಜೆಯಿಡಿ ಎಂದಿದ್ದಾರೆ.

ಕೊರೊನಾ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಯಡಿಯೂರಪ್ಪ ಗುಣಮುಖರಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೊನಾ ಟೆಸ್ಟ್ ಮಾಡಿಸಿದ್ದು, ಕೊರೊನಾ ನೆಗೆಟಿವ್ ಬಂದ ಕಾರಣಕ್ಕೆ ಯಡಿಯೂರಪ್ಪರನ್ನ ಡಿಸ್ಚಾರ್ಜ್ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಿಗಿ ಭದ್ರತೆ ಮೂಲಕ ಯಡಿಯೂರಪ್ಪರನ್ನ ಮನೆಗೆ ಕರೆದೊಯ್ಯಲಾಗಿದೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಕೋವಿಡ್ 19 ಸೋಂಕು ತಗುಲಿದ್ದು, ಇದನ್ನು ಸ್ವತಃ ಪ್ರಣಬ್ ಮುಖರ್ಜಿಯವರೇ ಸ್ಪಷ್ಟಪಡಿಸಿದ್ದು, ತಮ್ಮನ್ನು ಇತ್ತೀಚೆಗೆ ಭೇಟಿಯಾದವರೆಲ್ಲ ತಪ್ಪದೇ ಕೊರೊನಾ ಪರೀಕ್ಷೆ ಮಾಡಿಕೊಳ್ಳಿ ಎಂದಿದ್ದಾರೆ.

ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಶಮನಕ್ಕೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದ್ದು, ಪ್ರಿಯಾಂಕಾ ವಾದ್ರಾ ಮತ್ತು ರಾಹುಲ್ ಗಾಂಧಿ ರಾಜಸ್ಥಾನ ಮಾಜಿ ಡಿಸಿಎಂ ಮತ್ತು ಬಂಡಾಯ ಶಾಸಕ ಸಚಿನ್ ಪೈಲಟ್ ಜೊತೆ ಸಭೆ ನಡೆಸಿದ್ದಾರೆ. ಆಗಸ್ಟ್ 14 ಕ್ಕೆ ವಿಧಾನಸಭೆ ಅಧಿವೇಶನ ನಡೆಯಲಿದ್ದು ಅಂದು ಸಿಎಂ ಅಶೋಕ್ ಗೆಹ್ಲೋಟ್ ಬಹುಮತ ಸಾಬೀತು ಮಾಡಬೇಕಿದೆ. ಈ ಅವಧಿಯ ಒಳಗೆ ಸಚಿನ್ ಪೈಲಟ್ ಸೇರಿದಂತೆ ಇತರೆ 18 ಮಂದಿ ಶಾಸಕರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಹೈಕಮಾಂಡ್ ಪ್ಲ್ಯಾನ್ ಮಾಡಿದೆ.

- Advertisement -

Latest Posts

Don't Miss