ಅಖಂಡ ಶ್ರೀನಿವಾಸ್ ಮೂರ್ತಿಗೆ ಸೆಕ್ಯೂರಿಟಿ ಇಲ್ಲವೆಂದು ಡಿಕೆಶಿ ಬೇಸರ..!

ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ದಾಳಿ ನಡೆದರೂ ಕೂಡ ಈ ವರೆಗೆ ರಾಜ್ಯ ಸರ್ಕಾರ ಎಮ್‌ಎಲ್‌ಎ ಮನೆಗೆ ಸೆಕ್ಯೂರಿಟಿ ನೀಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರದ ನಿಶ್ಕಾಳಜಿಯನ್ನ ತೋರಿಸುತ್ತದೆ. ಅಖಂಡ ಶ್ರೀನಿವಾಸ್ ಮೂರ್ತಿರಿಗೆ ರಕ್ಷಣೆ ನೀಡಬೇಕೆಂದು ನಾನು ಸಿಎಂ ಯಡಿಯೂರಪ್ಪನವರಲ್ಲಿ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.


ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಎಸ್‌.ಆರ್.ವಿಶ್ವನಾಥ್ ಅವರು ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಧ್ವಜಾರೋಹಣ ಮಾಡಿ ಸರ್ಕಾರಿ ಗೌರವ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಯಲಹಂಕ ತಹಶೀಲ್ದಾರ್, ಸಹಾಯಕ ಪೋಲಿಸ್ ಆಯುಕ್ತರು, ಬಿಬಿಎಂಪಿ ಸದಸ್ಯರು, ಅಧಿಕಾರಿಗಳು, ಎಲ್ಲಾ ಸರ್ಕಾರಿ ಇಲಾಖೆಗಳ ಸಿಬ್ಬಂದಿಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಆರ್.ವಿಶ್ವನಾಥ್ ಸನ್ಮಾನ ಮಾಡಿ ಪ್ರೋತ್ಸಾಹ ಧನ ನೀಡಿದರು.
ಯಲಹಂಕ ವಿಧಾನಸಭಾ ಕ್ಷೇತ್ರದ ದಾಸನಪುರ ಹೋಬಳಿಯ ಚಿಕ್ಕಬಿದರಲ್ಲು ಗ್ರಾಮದ ನಿವಾಸಿ ‘ಚಿರಾಯು’ ಎಂಬಾತ SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯದಲ್ಲಿಯೇ ಮೊದಲನೆಯ ಸ್ಥಾನ ಪಡೆದಿರುತ್ತಾರೆ.
ಅದೇ ಗ್ರಾಮದ ಇಬ್ಬರು 92% ಹಾಗೂ 83% ಪಡೆದು ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಪ್ರೋತ್ಸಾಹ ಧನ ನೀಡಿದರು.


ಬಾಲಿವುಡ್ ನಟಿ ಕಂಗನಾ ರಾಣಾವತ್ಗೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ರಾಜಕೀಯಕ್ಕೆ ಬರಲು ಟಿಕೇಟ್ ನ ಆಫರ್ ನೀಡಲಾಗಿತ್ತು ಎಂದು ಸ್ವತಃ ಕಂಗನಾ ರಾಣಾವತ್ ತಮ್ಮ ಟ್ವೀಟರ್ ಮೂಲಕ ತಿಳಿಸಿದ್ದಾರೆ. ಮಣಿಕರ್ಣಿಕಾ ಚಿತ್ರದ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೆಗೆ ನಿಲ್ಲಲು ನನಗೆ ಟಿಕೇಟ್ ಆಫರ್ ಮಾಡಿತ್ತು. ಆದ್ರೆ ನಾನು ಒಬ್ಬ ಕಲಾವಿದೆಯಾಗಿರಲು ಮಾತ್ರ ಇಷ್ಟಪಡುತ್ತೇನೆ. ರಾಜಕೀಯಕ್ಕೆ ಬರುವ ಯೋಚನೆ ನಾನೆಂದು ಮಾಡಿಲ್ಲ ಎಂದಿದ್ದಾರೆ. ಇತ್ತೀಚಿಗೆ ಸುಶಾಂಗ್ ಸಿಂಗ್ ಸಾವಿನ ಪ್ರಕರಣದ ವಿರುದ್ಧ ದನಿ ಎತ್ತಿದ್ದ ಕಂಗನಾ, ನೆಪೋಟಿಸಮ್ ವಿರುದ್ಧ ಮಾತನಾಡಿದ್ದರು. ಈ ಮೂಲಕ ಬಾಲಿವುಡ್‌ನ ಕೆಲ ಡೈರೆಕ್ಟರ್ ಆ್ಯಕ್ಟರ್‌ಗಳ ಬಣ್ಣ ಬಯಲು ಮಾಡಿದ್ದರು.


ರಾಕಿಂಗ್ ಸ್ಟಾರ್ ಯಶ್, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋವೊಂದನ್ನ ಅಪ್ಲೋಡ್ ಮಾಡಿದ್ದು, ಫುಲ್ ಆಫ್ ಸಸ್ಪೆನ್ಸ್ ಆಗಿದೆ. ಇನ್ನೆರಡು ದಿನದಲ್ಲಿ ವಿಲನ್ ಬರಲಿದ್ದಾನೆಂಬ ಸುಳಿವು ಕೊಟ್ಟಿದ್ದಾರೆ. ಇಸ್ ಬಾರ್ ಹಿರೋ ನಹಿ ವಿಲನ್ ಆ ರಹಾ ಹೈ ಅನ್ನೋ ವೀಡಿಯೋ ಇದಾಗಿದ್ದು, ಯಶ್ ಫೋಟೋ ಕೂಡ ಈ ವೀಡಿಯೋದಲ್ಲಿದೆ. ಇದು ಕೆಜಿಎಫ್ ಸಿಕ್ವೇಲ್ ನ ವಿಲನ್ ಸಂಜಯ್‌ ದತ್ ಎಂಟ್ರಿ ಬಗ್ಗೆ ರಿಲೀಸ್ ಮಾಡಿರುವ ವೀಡಿಯೋ ಎಂದು ಕೆಲವರು ಅಂದಾಜಿಸಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author