www.karnatakatv.net : ಬೆಳಗಾವಿ – ಹೈದರಾಬಾದ್ ನಡುವೆ ಸಂಚರಿಸುವ ವಿಮಾನಮೊಂದು ದುರಂತದಿoದ ಪಾರಾಗಿದ್ದು ರಾಂಗ್ ರನ್ ವೇನಲ್ಲಿ ಲ್ಯಾಂಡ್ ಆಗಿದೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಖಾಸಗಿ ರಂಗದ ಸ್ಪೈಸ್ ಜೆಟ್ ವಿಮಾನ ದುರಂತದಿoದ ಪಾರಾಗಿದ್ದು, 26ನೇ ರನ್ ವೇನಲ್ಲಿ ಲ್ಯಾಂಡಿoಗ್ ಆಗಬೇಕಿದ್ದ ವಿಮಾನವು 8ನೇ ರನ್ ವೇನಲ್ಲಿ ಲ್ಯಾಂಡಿoಗ್ ಆಗಿದೆ. 8ನೇ ರನ್ ವೇನಲ್ಲಿ ಯಾವುದೇ ವಿಮಾನ ಇಲ್ಲದಿದ್ದರಿಂದ ಸೇಫ್ ಆಗಿರುವುದು ಸ್ಪಷ್ಟವಾಗಿದೆ. ವಿಮಾನ ಅಪಘಾತ ತನಿಖಾ ದಳವು ತನಿಖೆ ಆರಂಭಿಸಿದೆ. ಅಪಘಾತ ತನಿಖಾ ದಳವು ಪೈಲಟ್ ಗಳನ್ನು ತನಿಖೆಗೆ ಒಳಪಡಿಸಿದೆ.
Directorate General of Civil Aviation (DGCA) ಮತ್ತು Aircraft Accident Investigation Bureau (AAIB ) ಮಾಹಿತಿಯನ್ನಾಧರಿಸಿ, ತನಿಖೆಯನ್ನು ಕಾಯ್ದಿರಿ ಇಬ್ಬರೂ ಪೈಲಟ್ ಗಳನ್ನು ಸೇವೆಯಿಂದ ವಾಪಸ್ ಪಡೆಯಲಾಗಿದೆ ಎಂದು ಸ್ಪೈಸ್ ಜೆಟ್ ವಿಮಾನ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

