Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯ ನುಡಿದಿದ್ದು, ಈ ವರ್ಷ ಕುಂಭ ರಾಶಿಯವರ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ.
ಕುಂಭ ರಾಶಿಯವರಿಗೆ ಸದ್ಯ ಸಾಡೇಸಾಥ್ ನಡೆಯುತ್ತಿದೆ. ಇನ್ನೂ 1 ವರ್ಷಗಳ ಕಾಲ ಸಾಡೇಸಾಥ್ ಇರಲಿದೆ. ಹಾಗಾಗಿ ಕುಂಭ ರಾಶಿಯವರಿಗೆ ಕೆಲವು ಸಮಸ್ಯೆ ಬರಲಿದೆ. ಹಾಗಾಗಿ ನೀವು ಎಚ್ಚರಿಕೆಯಿಂದ ಇರುವುದು ತುಂಬಾ ಮುಖ್ಯ.
ಕುಜ ಕೂಡ ಆರೋಗ್ಯ ಸಮಸ್ಯೆ ನೀಡಲಿದ್ದು, ಗೌಪ್ಯ ಖಾಯಿಲೆ ಬರುವ ಸಾಧ್ಯತೆ ಇದೆ. ದೇಹದಲ್ಲಿ ಇರುವ ಗೌಪ್ಯ ಖಾಯಿಲೆ ಕಂಡು ಹಿಡಿಯುವುದು ತುಂಬಾ ಕಷ್ಟ. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಸಣ್ಣ ಆರೋಗ್ಯ ಸಮಸ್ಯೆ ಇದ್ದರೂ ಕೂಡ, ವೈದ್ಯರ ಬಳಿ ಪರೀಕ್ಷಿಸಿ, ಚಿಕಿತ್ಸೆ ಪಡೆಯಿರಿ.
ಇನ್ನು ವ್ಯವಹಾರದಲ್ಲಿ ಸಮಸ್ಯೆ ಆಗಿ, ಹಣಕಾಸಿನ ಸಮಸ್ಯೆ ಆಗಬಹುದು. ಸಾಲ ಮಾಡುವ ಸಾಧ್ಯತೆ ಇರುತ್ತದೆ. ಆದರೆ ಯಾವುದೇ ಕಾರಣಕ್ಕೂ ಸಾಲ ಮಾಡಬೇಡಿ. ಸಾಲ ತೀರಿಸುವಾಗ ಪರದಾಡಬೇಕಾಗುತ್ತದೆ. ಸಾಲ ನೀಡಿದವರು ನಿಮ್ಮ ಮನೆ ಬಾಗಿಲಿಗೆ ಬಂದು ಅವಮಾನಿಸಬಹುದು. ಅಲ್ಲದೇ, ಮನೆಜನ, ರಕ್ತ ಸಂಬಂಧಿಕರು, ತಂದೆ-ತಾಯಿ, ಸಹೋದರ-ಸೋಹದರಿ ಹೀಗೆ ನಿಮ್ಮವರೇ ನಿಮ್ಮನ್ನು ಬೈದು ಅವಮಾನಿಸುವ ಸಂದರ್ಭ ಬರಬಹುದು. ಹಾಗಾಗಿ ಎಚ್ಚರದಿಂದಿರಿ.




