- Advertisement -
Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿಯವರು 2026ರ ರಾಶಿ ಭವಿಷ್ಯವನ್ನು ವಿವರಿಸಿದ್ದು, ಕನ್ಯಾ ರಾಶಿಯವರಿಗೆ ಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ..
ಈ ವರ್ಷ ಕನ್ಯಾ ರಾಶಿಯವರಿಗೆ ಅತ್ಯುತ್ತಮ ವರ್ಷವಾಗಿರುತ್ತದೆ. ಈ ವರ್ಷ ಕನ್ಯಾ ರಾಶಿಯವರಿಗೆ ಫಲಪ್ರದವಾಗಿರುತ್ತದೆ. ಚಂದ್ರ, ಕೇತು ಎಲ್ಲರೂ ಅದೃಷ್ಟ ನೀಡಲಿದ್ದು, ಈ ವರ್ಷ ಮುಟ್ಟಿದ್ದೆಲ್ಲವೂ ಚಿನ್ನವಾಗುವ ಸಮಯ ಕನ್ಯಾ ರಾಶಿಯವರದ್ದಾಗಿರುತ್ತದೆ.
ನೀವು ಪ್ರಾಮಾಣಿಕರಾಗಿ ಕೆಲಸ ಮಾಡಿದ್ದಲ್ಲಿ, ನಿಮ್ಮ ಕೆಲಸಗಳು ಕೈಗೂಡುತ್ತದೆ. ನಿಮ್ಮನ್ನು ನೋಡಿ ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ನೀವು ತೋರಿಕೆಯ ಜೀವನದಿಂದ ದೂರವಿರುವುದು ಉತ್ತಮ. ಗೌಪ್ಯತೆಯಲ್ಲಿ ವ್ಯವಹಾರಗಳನ್ನು ಮಾಡಿ, ತೋರಿಕೆಯಲ್ಲಿ ದೃಷ್ಟಿ ದೋಷ ಹೆಚ್ಚಾಗಲಿದೆ.
ನಿಮ್ಮ ಆಲೋಚನೆ, ನಿರ್ಧಾರ ಎಲ್ಲವೂ ಅತ್ಯುತ್ತಮವಾಗಿರುತ್ತದೆ. ವ್ಯವಹಾರದಲ್ಲಿ ಅನುಕೂಲಕರವಾದ ದಿನಗಳಿದೆ.
- Advertisement -

