Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯವನ್ನು ಹೇಳಿದ್ದು, 2026ರಲ್ಲಿ ಕರ್ಕ ರಾಶಿ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ.
ರಾಶ್ಯಾಧಿಪತಿ ಚಂದ್ರ ಸ್ವಕ್ಷೇತ್ರದಲ್ಲಿ ಬಂದು ಕುಳಿತಾಗ ಮನಸ್ಸು ನಿರಾಳವಾಗಿರುತ್ತದೆ. ಮನಸ್ಸು ಬಹಳ ಶಾಂತವಾಗಿರುತ್ತದೆ. ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ ಕಾಣುವ ಸುಯೋಗಗಳು ನಿಮಗೆ ಕೂಡಿ ಬರಲಿದೆ. ಆದರೆ 12ನೇ ಮನೆಯಲ್ಲಿರುವ ಗುರುವಿನ ದೋಷ ಕಾಡುತ್ತಲೇ ಇರುತ್ತದೆ.
ಏಕೆಂದರೆ ಕರ್ಕ ರಾಶಿಯವರಿಗೆ ಈ ವರ್ಷ ಗುರು ಬಲವಿಲ್ಲ. ಆದರೆ ಶನಿಯೋಗ ಉತ್ತಮವಾಗಿದ್ದು, ಉತ್ತಮ ಫಲ ನೀಡಲಿದೆ. ನಿಮ್ಮ ಕಾರ್ಯಗಳಿಗೆ ಮನೆಯವರಿಂದ, ತಂದೆ, ಸಹೋದರರಿಂದ ಸಹಯೋಗ ಸಿಗಲಿದೆ. ಆದರೆ ಆರೋಗ್ಯದ ವಿಷಯದಲ್ಲಿ ಕರ್ಕ ರಾಶಿಯವರು ಎಚ್ಚರಿಕೆ ವಹಿಸಬೇಕು.
ವ್ಯವಹಾರದಲ್ಲಿ, ಆರೋಗ್ಯದ ವಿಷಯದಲ್ಲಿ ಕರ್ಕ ರಾಶಿಯವರಿಗೆ ಅನುಕೂಲಕರವಾಗಿಲ್ಲ. ಪ್ರೇಮ ವಿವಾಹವಾಗುವವರು ಈ ವರ್ಷ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಶುಕ್ರನ ಕುದೃಷ್ಟಿ ಇರುವ ಕಾರಣಕ್ಕೆ ಈ ವರ್ಷ ಪ್ರೇಮ ವಿವಾಹವಾಗುವುದು ಅಷ್ಟು ಅನುಕೂಲವಾಗಿಲ್ಲ.

