Spiritual: ನಾವು ಬೇರೆಯವರ ಮನೆಗೆ ಹೋದರೆ ಅವರು ನೀಡಿದರೂ, ಅಥವಾ ನಾವಾಗಿಯೇ ಕೆಲ ವಸ್ತುಗಳನ್ನು ತರಬಾರದು. ಹಾಗಾದ್ರೆ ನಾವು ಎಂಥ ವಸ್ತುಗಳನ್ನು ಮತ್ತು ಯಾಕೆ ತರಬಾರದು ಅಂತಾ ತಿಳಿಯೋಣ ಬನ್ನಿ..
ಛತ್ರಿ: ಬೇರೆಯವರ ಮನೆಯಿಂದ ನೀವು ಛತ್ರಿ ತರಬಾರದು. ಅಥವಾ ಯಾರ ಛತ್ರಿಯನ್ನಾದರೂ ಕದಿಯಬಾರದು. ಇದರಿಂದ ಗ್ರಹಗತಿ ಬದಲಾಗಿ, ಅವರ ಪಾಲಿನ ದುರಾದೃಷ್ಟ ನಿಮ್ಮ ಪಾಲಾಗುತ್ತದೆ.
ಚಪ್ಪಲಿ: ಬೇರೆಯವರ ಮನೆಯಿಂದಾಗಲಿ, ದೇವಸ್ಥಾನ ಅಥವಾ ಯಾವುದೇ ಸ್ಥಳಕ್ಕೆ ಹೋದಾಗ, ಅಲ್ಲಿಂದ ಯಾವುದೇ ಕಾರಣಕ್ಕೂ ಚಪ್ಪಲಿಯನ್ನು ಮನೆಗೆ ತರಬೇಡಿ. ನಿಮ್ ಚಪ್ಪಲಿ ಯಾರೋ ಕದ್ದರೆಂದು, ಬೇರೆಯವರ ಚಪ್ಪಲಿ ನೀವು ತಂದು ಮನೆಯಲ್ಲಿರಿಸಿದರೆ, ಅವರಿಗಾಗಬೇಕಾದ ನಷ್ಟ ನಿಮ್ಮ ಪಾಲಾಗುತ್ತದೆ. ಆ ಚಪ್ಪಲಿ ನಡೆದು ಬಂದ ಜಾಗದ ದರಿದ್ರವೆಲ್ಲ ನಿಮ್ಮ ಮನೆಯ ಭಾಗವಾಗುತ್ತದೆ. ಹಾಗಾಗಿಯೇ ಮನೆಯಲ್ಲಿ ಸದಾಕಾಲ ಜಗಳ, ನೆಮ್ಮದಿ ಇಲ್ಲದಿರುವ ವಾತಾವರಣ ನಿರ್ಮಾಣವಾಗುತ್ತದೆ.
ಖಾಲಿ ವಸ್ತು: ನೀವು ನೋಡಿರಬಹುದು. ನೀವು ಯಾರಿಗಾದರೂ ತಿಂಡಿ, ತಿನಿಸು ನೀಡಿದರೆ, ಆ ಡಬ್ಬ, ಪ್ಲೇಟ್, ಲೋಟೆ ಖಾಲಿ ನೀಡದೇ, ಸಕ್ಕರೆಯನ್ನಾದರೂ ತುಂಬಿಸಿಕ“ಡುತ್ತಾರೆ. ಅಥವಾ ಅದರಲ್ಲಿ ಯವಾುದಾದರೂ ತಿಂಡಿ ಹಾಾಕಿಕ“ಡುತ್ತಾರೆ. ಏಕೆಂದರೆ, ಖಾಲಿ ವಸ್ತುಗಳನ್ನು ಎಂದಿಗೂ ನೀಡಬಾರದು, ಮತ್ತು ತೆಗೆದುಕ“ಳ್ಳಬಾರದು.
ಕಬ್ಬಿಣ: ನೀವು ಬೇರೆಯವರ ಮನೆಗೆ ಹೋದಾಗ, ಅಥವಾ ರಸ್ತೆಯಲ್ಲಿ, ಅಥವಾ ಯಾವುದೇ ಸ್ಥಳದಿಂದ ಕಬ್ಬಿಣದ ವಸ್ತು ಮನೆಗೆ ತರಬಾರದು. ಅದೇನೇ ಆಗಲಿ, ಪಿನ್, ಆಣಿ, ಚಾಕು, ಕತ್ತಿ, ಹೀಗೆ ಯಾವುದೇ ಕಬ್ಬಿಣದ ವಸ್ತು ಮನೆಗೆ ತರಬಾರದು.