Spiritual: ರವಿವಾರ ರಜಾ ದಿನ. ಹಾಗಾಗಿ ಹಲವರು ಎಲ್ಲ ಕೆಲಸಗಳನ್ನು ರವಿವಾರದಂದೇ ಇಟ್ಟುಕ“ಳ್ಳುತ್ತಾರೆ. ಪೂಜೆ, ಹೋಮ-ಹವನ, ಪ್ರವಾಸ, ಅತಿಥಿಗಳನ್ನು ಬರಹೇಳುವುದು, ಅತಿಥಿಗಳ ಮನೆಗೆ ಹೋಗುವುದು ಹೀಗೆ ಹಲವು ವಿಚಾರಗಳು. ಕೆಲವರಂತೂ ಹಿರಿಯರ ಶ್ರಾದ್ಧವನ್ನು ಸಹ ತಮಗೆ ಬಿಡುವಿದ್ದಾಗ ಮಾಡುತ್ತಾರೆ. ಆದರೆ ನಾವು ರವಿವಾರದಂದು ಕೆಲ ಕೆಲಸಗಳನ್ನು ಮಾಡಲೇಬಾರದು. ಹಾಗಾದ್ರೆ ಯಾವ ಕೆಲಸಗಳನ್ನು ರವಿವಾರ ಮಾಡಬಾರದು. ಏಕೆ ಅಂತಾ ತಿಳಿಯೋಣ ಬನ್ನಿ..
ತುಳಸಿಗೆ ನೀರು ಹಾಕಬೇಡಿ: ರವಿವಾರದ ದಿನ ತುಳಸಿಗೆ ನೀರು ಹಾಕಬಾರದು. ಏಕೆಂದರೆ ಅಂದು ತುಳಸಿ ಉಪವಾಸವಿರುತ್ತಾಳೆ ಅನ್ನೋದು ಧಾರ್ಮಿಕ ನಂಬಿಕೆ. ಆದರೆ ವಿಜ್ಞಾನದ ಪ್ರಕಾರ, ರವಿವಾರದ ದಿನ ಎಂದಿನಂತೆ ತಾಪ ಹೆಚ್ಚಾಗಿರುತ್ತದೆ. ಅಲ್ಲದೇ, ತುಳಸಿ ಉಷ್ಣ ವಸ್ತು. ರವಿವಾರದ ದಿನ ನಮ್ಮ ದೇಹದಲ್ಲಿಯೂ ಉಷ್ಣತೆ ಅಧಿಕವಾಗಿರುತ್ತದೆ. ಹೀಗಿರುವಾಗ ನಾವು ತುಳಸಿಯನ್ನು ಸ್ಪರ್ಶ ಮಾಡಿದರೆ, ಅದು ಬಾಡಿ ಹೋಗುವ ಸಾಧ್ಯತೆ ಹೆಚ್ಚು. ಹಾಗಾಗಿ ತುಳಸಿ ಗಿಡಕ್ಕೆ ರವಿವಾರದಂದು ನೀರು ಹಾಕಬಾರದು.
ಚಿನ್ನ-ಬೆಳ್ಳಿ ಖರೀದಿಸಬೇಡಿ: ಧಾರ್ಮಿಕ ನಂಬಿಕೆಯ ಪ್ರಕಾರ ರವಿವಾರದ ದಿನ ಚಿನ್ನ-ಬೆಳ್ಳಿ ಖರೀದಿ ಮಾಡಬಾರದು. ಹೀಗೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ಆ ಚಿನ್ನದಿಂದ ನಮಗೆ ನೆಮ್ಮದಿ ಸಿಗುವುದಿಲ್ಲವೆನ್ನಲಾಗಿದೆ.
ರವಿವಾರದ ದಿನ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಬೇಡಿ. ದೇಹಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದು ಉತ್ತಮ. ಆದರೆ ರವಿವಾರದಂದು ಉಷ್ಣತೆಯ ಪ್ರಮಾಣ ಹೆಚ್ಚಾಗಿದ್ದು, ಈ ದಿನ ಸಾಸಿವೆ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಬಾರದು. ಮತ್ತು ಸಾಸಿವೆ ಎಣ್ಣೆಯ ಪದಾರ್ಥ ಸೇವಿಸಬಾರದು. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಕಪ್ಪು, ನೀಲಿ, ಕಂದು ಬಣ್ಣದ ಉಡುಪು ಧರಿಸಬೇಡಿ: ರವಿವಾರದ ದಿನ ಸೂರ್ಯನ ಬಿಸಿಲು ಹೆಚ್ಚಾಗಿರುವುದರಿಂದ ಈ ದಿನ ನಾವು ಕಪ್ಪು, ನೀಲಿ, ಕಂದು ಬಣ್ಣದ ಉಡುಪನ್ನು ಧರಿಸಬಾರದು. ಇದರಿಂದ ನಮ್ಮ ದೇಹದ ಉಷ್ಣತೆ ಇನ್ನೂ ಹೆಚ್ಚಾಗಿ, ಆರೋಗ್ಯ ಸಮಸ್ಯೆ ಶುರುವಾಗುತ್ತದೆ.