Thursday, November 13, 2025

Latest Posts

Spiritual: ನಿಮ್ಮ ಮಂಗಳಸೂತ್ರವನ್ನು ಬೇರೆಯವರಿಗೆ ನೀಡಬೇಡಿ

- Advertisement -

Spiritual: ಮಂಗಳಸೂತ್ರ ಅನ್ನೋದು ಬರೀ 1 ಸರವಲ್ಲ. ಇಂದಿನ ಕಾಲದ ಹಲವು ಹೆಣ್ಣು ಮಕ್ಕಳು ಮಂಗಲಸೂತ್ರಕ್ಕೆ ಬೆಲೆಯೇ ನೀಡುವುದಿಲ್ಲ. ಅಪರೂಪಕ್ಕೆ ಅಲಂಕಾರಕ್ಕಾಗಿ ಮಂಗಲಸೂತ್ರ ಧರಿಸುತ್ತಾರೆ. ಇನ್ನು ಕೆಲವರು ಡಿಸೈನ್ ಚೆನ್ನಾಗಿದೆ ನಾನು 1 ಸಲ ಹಾಕೋತೀನಿ ಅಂತಾ ಕೇಳ್ತಾರೆ. ಹಾಗೆ ಕೇಳಿದರೂ ಅಂತಾ ನೀವು ಬೇರೆಯವರಿಗೆ ನಿಮ್ಮ ಮಂಗಳಸೂತ್ರ ನೀಡುವಂತಿಲ್ಲ. ಹಾಗಾದ್ರೆ ಏಕೆ ನಾವು ಧರಿಸಿದ ಮಂಗಳಸೂತ್ರವನ್ನು ಬೇರೆಯವರಿಗೆ ನೀಡಬಾರದು ಅಂತಾ ತಿಳಿಯೋಣ ಬನ್ನಿ..

ಹಿಂದೂಗಳಲ್ಲಿ ವಿವಾಹಿತ ಮಹಿಳೆಯರು ಸದಾಕಾಲ ಮಾಂಗಲ್ಯವನ್ನು ಧರಿಸಿಯೇ ಇರಬೇಕು ಎಂಬ ನಿಯಮವಿದೆ. ಇದರಿಂದ ಪತಿಯ ಆಯಸ್ಸು ಹೆಚ್ಚುತ್ತೆ, ಆರೋಗ್ಯ ಚೆನ್ನಾಗಿರುತ್ತದೆ ಅಂತಾನೂ ಹೇಳಲಾಗುತ್ತದೆ. ಇದರ ಹಿಂದೆ ಹಲವು ಕಾರಣಗಳಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಈ ವಿಷಯ ಟ್ರೋಲ್ ಆಗುತ್ತಿದೆ. ಪತ್ನಿ ತಾಳಿ ತೆಗೆದ ತಕ್ಷಣ ಪತಿ ಸಾಯುವಂತೆ ನಾಟಕವಾಡುತ್ತಾನೆ.

ಆದರೆ ಹಿಂದೂ ಸಂಪ್ರದಾಯದ ಪ್ರಕಾರ ಪತಿ ಸತ್ತ ತಕ್ಷಣ ಪದ್ಧತಿ ಪ್ರಕಾರವಾಗಿ ಪತ್ನಿ ತಾಳಿ ತೆಗೆಯಬೇಕು. ಹಾಗಾಗಿ ವಿವಾಹಿತೆಯರು ಎಂದಿಗೂ ತಾಳಿ ತೆಗೆಯಬಾರದು ಅಂತಾ ಹೇಳಲಾಗುತ್ತದೆ.

ಇನ್ನು ತಾಳಿಯನ್ನು ಯಾರ ಜತೆಯೂ ಶೇರ್ ಮಾಡಬಾರದು. ಅಂದ್ರೆ ನೀವು ಧರಿಸಿದ ತಾಳಿಯನ್ನು ಬೇರೆಯವರಿಗೆ ಧರಿಸಲು ನೀಡಬಾರದು. ಡಿಸೈನ್ ಚೆನ್ನಾಗಿ 1 ಸಲ ನಾನು ಹಾಕ್ತೀನಿ ಅಂದ್ರೆ ನೀವು ಅದನ್ನು ನೀಡಬಾರದು. ಇದರಿಂದ ನಿಮ್ಮ ಪತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಆರೋಗ್ಯ ಹಾಳಾಗುವ ಸಾಧ್ಯತೆ ಇರುತ್ತದೆ ಅನ್ನೋ ನಂಬಿಕೆ ಇದೆ.

- Advertisement -

Latest Posts

Don't Miss