Spiritual: ನಮ್ಮ ಮನೆಯ ದೇವರ ಕೋಣೆ ಯಾವ ಭಾಗದಲ್ಲಿ, ಯಾವ ದಿಕ್ಕಿನಲ್ಲಿ, ಯಾವ ರೀತಿ ಇರುತ್ತದೆಯೋ, ನಮ್ಮ ಜೀವನವೂ ಅದೇ ರೀತಿ ಇರುತ್ತದೆ. ಹಾಗಾಗಿಯೇ ದೇವರ ಕೋಣೆಯನ್ನು ಕ್ಲೀನ್ ಆಗಿರಿಸಬೇಕು. ಸರಿಯಾದ ದಿಕ್ಕಿನಲ್ಲಿ ಸ್ಥಾಪಿಸಬೇಕು ಅಂತಾ ಹೇಳಲಾಗುತ್ತದೆ. ಅಲ್ಲದೇ ದೇವರ ಕೋಣೆ ಡೈರೆಕ್ಟ್ ಆಗಿ ಬೇರೆಯವರಿಗೆ ಕಾಣಬಾರದು. ಯಾಕಂದ್ರೆ ದೃಷ್ಟಿ ತಾಕಿದರೆ, ಮನೆಯ ನೆಮ್ಮದಿ ಹಾಳಾಗುತ್ತದೆ ಅಂತಾ ಹೇಳಲಾಗುತ್ತದೆ.
ಇನ್ನು ದೇವರ ಕೋಣೆಯಲ್ಲಿ ನಾವು ಕೆಲ ವಸ್ತುಗಳನ್ನು ಇರಿಸಬಾರದು. ಹಾಗೆ ಇರಿಸುವುದು ಮನೆಗೂ ಉತ್ತಮವಲ್ಲ. ಹಾಗಾದ್ರೆ ಯಾವ ವಸ್ತುವನ್ನು ದೇವರ ಕೋಣೆಯಲ್ಲಿ ಇರಿಸಬಾರದು. ಯಾಕೆ ಇರಿಸಬಾರದು ಅಂತಾ ತಿಳಿಯೋಣ ಬನ್ನಿ..
ಗಂಗಾಜಲವನ್ನು ಈ ರೀತಿ ಇಡಬೇಡಿ: ನೀವು ಗಂಗಾಜಲ ತಂದು ದೇವರ ಕೋಣೆಯಲ್ಲಿರಿಸುವುದು ಉತ್ತಮ ವಿಷಯವೇ. ಆದರೆ ಅದನ್ನು ಇರಿಸುವ ರೀತಿ ಸರಿಯಾಗಿರಬೇಕು. ಗಂಗಾ ಜಲವನ್ನು ತಾಮ್ರದ ಅಥವಾ ಕಂಚಿನ ಗ್ಲಾಸಿನಲ್ಲಿರಿಸಿ. ನೀವು ಪ್ಲಾಸ್ಟಿಕ್ ಅಥವಾ ಬೇರೆ ಯಾವುದೇ ಪಾತ್ರೆಯಲ್ಲಿರಿಸಿದರೂ ಅದು ಪವಿತ್ರವಾಗಿರುವುದಿಲ್ಲ.
ದೇವರ ವಿಗ್ರಹದ ಬಗ್ಗೆ ಗಮನವಿರಲಿ: ದೇವರ ವಿಗ್ರಹಗಳು ಅಗತ್ಯಕ್ಕಿಂತ ಹೆಚ್ಚಿರಬಾರದು. 1 ವಿಗ್ರಹ ಮಾತ್ರ ಇರಬೇಕು. ಗಣಪತಿ ವಿಗ್ರಹವಿದ್ದರೆ, 1 ವಿಗ್ರಹಕ್ಕೆ ಮಾತ್ರ ಪೂಜಿಸಿ. ಹಲವು ಇರಿಸಬೇಡಿ. ಇನ್ನು ನೋಡಲು ಚೆಂದವೆಂದು ಬೃಹದಾಕಾರದ ಮೂರ್ತಿಗಳನ್ನು ದೇವರ ಕೋಣೆಯಲ್ಲಿರಿಸಬೇಡಿ. ಏಕೆಂದರೆ, ಈ ಮೂರ್ತಿಗೆ ಪ್ರತಿದಿನ ಅಭಿಷೇಕ ಪೂಜೆ, ನೈವೇದ್ಯ ಎಲ್ಲವೂ ಆಗಬೇಕು. ಕಾಲ ಕಾಲಕ್ಕೆ ಪೂಜೆ, ನೈವೇದ್ಯ ಮಾಡಲಾಗದಿದ್ದಲ್ಲಿ, ಬೃಹದಾಕಾರದ ವಿಗ್ರಹ ಇರಿಸಬೇಡಿ.
ಪಿತೃಗಳ ಫೋಟೋ: ಮರಣಿಸಿದ ಹಿರಿಯರ ಫೋಟೋವನ್ನು ದೇವರ ಕೋಣೆಯಲ್ಲಿರಿಸಬೇಡಿ. ಇದು ನೀವು ದೇವರಿಗೆ ತೋರುವ ಅಗೌರವವಾಗಿರುತ್ತದೆ. ದೇವರಿಗೆ ಸಮನಾಗಿ ನೀವು ಪಿತೃವನ್ನು ಪೂಜಿಸಲಾಗುವುದಿಲ್ಲ. ಹಾಗಾಗಿ ದೇವರ ಕೋಣೆಯಲ್ಲಿ ಪಿತೃಗಳ ಚಿತ್ರವಿರಬಾರದು.
ತುಂಡಾದ ವಿಗ್ರಹ ಅಥವಾ ಕ್ರ್ಯಾಕ್ ಆಗಿರುವ ಫೋಟೋ: ನೀವು ಪೂಜಿಸುವ ವಿಗ್ರಹವಾಗಲಿ, ಫೋಟೋವಾಗಲಿ ಅಥವಾ ಪೂಜೆಗೆ ಬಳಸುವ ಯಾವುದೇ ಸಾಮಗ್ರಿಯಾಗಲಿ ತುಂಡಾಗಿರಬಾರದು. ಅದು ಸರಿಯಾದ ರೀತಿಯಲ್ಲಿಯೇ ಇರಬೇಕು. ಇಲ್ಲವಾದಲ್ಲಿ, ಅಂಥ ವಿಗ್ರಹ, ಫೋಟೋಗೆ ಪೂಜಿಸಿದ ಪಾಪ ತಾಕುತ್ತದೆ.
ಪ್ಲಾಸ್ಟಿಕ್ ಹೂವು: ದೇವರಿಗೆ ಎಂದಿಗೂ ಪ್ಲಾಸ್ಟಿಕ್ ಹೂವಿನ ಬಳಕೆ ಮಾಡಬೇಡಿ. ನಿಜವಾದ ಹೂವನ್ನೇ ಬಳಸಬೇಕು. ಏಕೆಂದರೆ ದೇವರಿಗೆ ಸುಗಂಧವಿಲ್ಲದ ಹೂವು ಬಳಸುವುದು ತಪ್ಪು.