Spiritual: ನೀವು ಯಾವುದಾದರೂ ಮುಖ್ಯವಾದ ಕೆಲಸಕ್ಕೆ, ಅಥವಾ ಯಾವುದಾದರೂ ಮೌಲ್ಯವಾದ ವಸ್ತು ಖರೀದಿಗೋ, ಸಂದರ್ಶನಕ್ಕೋ ಹೀಗೆ ಯಾವುದಾದರೂ ಕೆಲಸಕ್ಕೆ ಹೋಗುವಾಗ, ಆ ಕೆಲಸದಲ್ಲಿ ಯಶಸ್ಸು ಸಿಗಬೇಕು ಅಂದ್ರೆ ನೀವು ಕೆಲ ಕೆಲಸಗಳನ್ನು ಮಾಡಬೇಕು. ಅದೇನು ಅಂತಾ ತಿಳಿಯೋಣ ಬನ್ನಿ..
ನೀವು ಮನೆಯಿಂದ ಆಚೆ ಹೋಗುವಾಾಗ, ಮನೆಯಲ್ಲಿ ದೇವರಿಗೆ ದೀಪ ಹಚ್ಚಿ, ಕೈ ಮುಗಿದು ಹೋಗಿ. ಇದರಿಂದ ನಿಮ್ಮ ಕೆಲಸ ಅರ್ಧ ಸುಲಭವಾಗುತ್ತದೆ. ದೇವರ ಆಶೀರ್ವಾದವಿದ್ದರೆ, ಕೆಲಸದಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ. ಇನ್ನು ನಿಮ್ಮ ಮನೆಯಲ್ಲಿರುವ ಹಿರಿಯರ ಆಶೀರ್ವಾದ ಪಡೆದು ಹೋದರೆ ಇನ್ನೂ ಉತ್ತಮ.
ನಮ್ಮ ಹಣೆಬರಹ ಬದಲಾಯಿಸುವಲ್ಲಿ ನಮ್ಮ ದೇಹದ ಪ್ರತೀ ಭಾಗವೂ ಕಾರಣವಾಗುತ್ತದೆ. ಅದರಲ್ಲೂ ನಾವೇ ನಿರ್ಮಿಸಿದ ಮನೆಯಲ್ಲಿ ನಾವು ನೆಮ್ಮದಿಯಾಗಿರಬೇಕು ಅಂದ್ರೆ, ಬಲಗಾಲಿರಿಸಿ, ಹೋಗಬೇಕು. ಎಡಗಾಲಿರಿಸಿ ಹೋದಲ್ಲಿ, ಆ ಮನೆಯಲ್ಲಿ ಕಿಂಚಿತ್ತು ನೆಮ್ಮದಿ ಇರುವುದಿಲ್ಲ. ಅದೇ ರೀತಿ ಮುಖ್ಯವಾದ ಕೆಲಸಕ್ಕೆ ಹೋಗುವಾಗ ನಾವು ಬಲಗಾಲನ್ನು ಆಚೆ ಇರಿಸಿ, ಇದರಿಂದ ಕೆಲಸ ಸುಲಭವಾಗುತ್ತದೆ.
ಇನ್ನು ಕೆಲಸಕ್ಕೆ ಹೋಗುವಾಗ ಸಿಹಿ ತಿಂದು ಹೋಗಿ. ಹಾಗಾಗಿಯೇ ಉತ್ತರ ಭಾರತೀಯರು ಕೆಲಸಕ್ಕೆ ಅಥವಾ ಸಂದರ್ಶನಕ್ಕೆ ಹೋಗದುವಾಗ ಸಕ್ಕರೆ- ದಹಿ ತಿಂದು ಹೋಗುತ್ತಿದ್ದರು. ನೀವು ಕೂಡ ಯಾವುದಾದರೂ ಕೆಲಸಕ್ಕೆ ಹೋಗುವಾಗ, ಸ್ವಲ್ಪ ಸಿಹಿ ತಿಂದು ಹೋಗಿ. ಇದರಿಂದ ನಿಮ್ಮ ದೇಹದಲ್ಲಿ ಸ್ವಲ್ಪ ಶಕ್ತಿ ಬರುತ್ತದೆ. ಇದು ನಿಮ್ಮನ್ನು ಆಲಸ್ಯದಿಂದ ಆಚೆ ಇರಿಸುತ್ತದೆ. ಹಾಗಾಗಿಯೇ ಸಕ್ಕರೆ ಸೇವಿಸಿ ಹೋಗಬೇಕು.